ನವ ದೆಹಲಿ, ಏ.೨೮,೨೦೨೫: ಪಹಲ್ಗಾಮ್ ಭಯೋತ್ಪಾದಕ ದಾಳಿಯ 48 ಗಂಟೆಗಳ ನಂತರ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಅವರ ಕುಟುಂಬ ದೇಶದಿಂದ ಪಲಾಯನ ಮಾಡಿದೆ ಎಂಬ ಗಾಳಿಸುದ್ಧಿ ಹರಡಿವೆ.
ಸೇನಾ ಮುಖ್ಯಸ್ಥ ಮುನೀರ್, ಡಿಜಿ ಐಎಸ್ಪಿಆರ್ ಲೆಫ್ಟಿನೆಂಟ್ ಜನರಲ್ ಅಸಿಮ್ ಮಲಿಕ್ ಮತ್ತು ಸಿಜೆಸಿಎಸ್ಸಿ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಪಾಕಿಸ್ತಾನವನ್ನು ತೊರೆದು ಯುನೈಟೆಡ್ ಕಿಂಗ್ಡಮ್ ಮತ್ತು ಯುಎಸ್ನ ನ್ಯೂಜೆರ್ಸಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ನಂಬಲಾಗಿದೆ. ಕುಟುಂಬಗಳು ತಮ್ಮ ಗಮ್ಯಸ್ಥಾನವನ್ನು ತಲುಪಲು ಖಾಸಗಿ ಜೆಟ್ ಗಳನ್ನು ಬಳಸಿವೆ ಎಂದು ಹೇಳಲಾಗುತ್ತದೆ.
ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲುಗಳಲ್ಲಿ ಕನಿಷ್ಠ 26 ಜನರನ್ನು ಬಲಿತೆಗೆದುಕೊಂಡ ಭೀಕರ ದಾಳಿಯ ನಂತರ ಭಾರತವು ದೇಶದಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನಿ ಪ್ರಜೆಗಳ ಮೇಲೆ ಕಠಿಣ ನಿಯಮಗಳನ್ನು ವಿಧಿಸಿದ ನಂತರ ಈ ಊಹಾಪೋಹಗ ಹರಡಿದೆ.
ಆರಂಭದಲ್ಲಿ, ಲಷ್ಕರ್-ಎ-ತೈಬಾ (ಎಲ್ಇಟಿ) ಶಾಖೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಜವಾಬ್ದಾರಿಯನ್ನು ವಹಿಸಿಕೊಂಡಿದ್ದವು, ಆದರೆ ಕೆಲ ದಿನಗಳ ಬಳಿಕ ಈ ಉಗ್ರಗಾಮಿ ಸಂಘಟನೆ ಪ್ರವಾಸಿ ಹತ್ಯೆಯ ಹಿಂದೆ ನಮ್ಮ ಕೈವಾಡವಿಲ್ಲ. ನಾವು ‘ಹ್ಯಾಕಿಂಗ್’ ನ ಬಲಿಪಶುಗಳು ಎಂದು ಹೇಳಿಕೆ ನೀಡಿದ್ದವು.
ಮಂಗಳವಾರ (ಏಪ್ರಿಲ್ 22) ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸುದ್ದಿ ಸಂಸ್ಥೆ ಸ್ಕೈ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ, ‘ಲಷ್ಕರ್-ಎ-ತೈಬಾ ತಮ್ಮ ನೆಲದಲ್ಲಿ ಅಸ್ತಿತ್ವದಲ್ಲಿಲ್ಲ’ ಮತ್ತು ಅವರ ಹೇಳಿಕೆ ದೃಢೀಕರಿಸಲು, ‘ಅದು ನಿರ್ನಾಮವಾಗಿದೆ’ ಎಂದಿದ್ದರು.
key words: Army Chief General, Asim Munir, flees from Pakistan
SUMMARY:
Army Chief General Asim Munir flees from Pakistan…? 48 hours after the Pahalgam terror attack, rumours are rife that Pakistan Army chief General Asim Munir and his family have fled the country.