ಒಳ ಮೀಸಲಾತಿ ಸಮೀಕ್ಷೆಗೆ ಶಿಕ್ಷಕರಲ್ಲದೆ ಬೇರೆ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನ ಬಳಸಿಕೊಳ್ಳಿ- MLC ವಿವೇಕಾನಂದ ಪತ್ರ

ಮೈಸೂರು,ಏಪ್ರಿಲ್,28,2025 (www.justkannada.in): ಸರ್ಕಾರದಿಂದ ನಡೆಸಲಾಗುತ್ತಿರುವ ಎಸ್.ಸಿ. ಒಳಮೀಸಲಾತಿ ಸಮೀಕ್ಷೆ ಮಾಡುವ ಗಣತಿದಾರರಾಗಿ ಬೇರೆ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರನ್ನು ಬಳಸಿಕೊಂಡು ಅವಶ್ಯಕತೆ ಇದ್ದಲ್ಲಿ ಶಿಕ್ಷಕರನ್ನು ಬಳಸಿಕೊಂಡು ಇವರಿಗೆ ಗಳಿಕೆ ರಜೆ ಹಾಗೂ ಗೌರವಧನವನ್ನು ಮಂಜೂರು ಮಾಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಎಂಎಲ್ ಸಿ ವಿವೇಕಾನಂದ,  ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನ್ ದಾಸ್, ಏಕ ಸದಸ್ಯ ವಿಚಾರಣಾ ಆಯೋಗಿದಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ಕ್ರಮಹಿಸಲು ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆಗೆ ಬೇಸಿಗೆ ರಜೆಯಲ್ಲಿರುವ ಶಿಕ್ಷಣ ಇಲಾಖೆಯಿಂದ 60 ಸಾವಿರ ಶಿಕ್ಷಕರುಗಳನ್ನು ಗಣತಿದಾರರನ್ನಾಗಿ (Enumerators) ನಿಯೋಜಿಸಿಕೊಳ್ಳುತ್ತಿರುವುದು ಸರಿಯಷ್ಟೆ.

ಆದರೆ ಈ ಜಾತಿ ಗಣತಿಯ ಸಮೀಕ್ಷೆಗೆ ಗಣತಿದಾರರಾಗಿ ಬೇರೆ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರನ್ನು ಪರಿಪೂರ್ಣವಾಗಿ ಬಳಸಿಕೊಂಡು ಅವಶ್ಯವಿದ್ದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಬೇಕು ಹಾಗೂ ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ವಯ ರಜಾ ಅವಧಿಯಲ್ಲಿ ಒಳಮೀಸಲಾತಿ ಸಮೀಕ್ಷೆ ಮಾಡುವ ಗಣತಿದಾರರಿಗೆ ಗಳಿಕೆ ರಜೆ ಹಾಗೂ ಹೆಚ್ಚು ಗೌರವಧನವನ್ನು ಎಸ್.ಸಿ. ಒಳಮೀಸಲಾತಿ ಸಮೀಕ್ಷೆ ಮಾಡುವ ಮುನ್ನವೆ ಆದೇಶ ಹೊರಡಿಸಿ ಅವಶ್ಯಕತೆ ಇದ್ದಲ್ಲಿ ಈ ಶಿಕ್ಷಕರನ್ನು ಬಳಸಿಕೊಳ್ಳಬೇಕೆಂದು ತಮ್ಮಲ್ಲಿ ಈ ಮೂಲಕ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Key words: Internal reservation, survey, MLC, Vivekananda, Letter