ಅಮೇರಿಕಾದಲ್ಲಿ ಘಟನೆ:  ಪತ್ನಿ, ಪುತ್ರನಿಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಮೈಸೂರಿನ ಟೆಕ್ಕಿ..!

The act was committed by Mysuru-based businessman Kikkeri Harshavardhan. The incident took place at his residence in Newcastle, USA. 57-year-old Harshvardhan kills wife, son and commits suicide

ಮೈಸೂರು, ಏ.೨೯,೨೦೨೫: ಅಮೇರಿಕಾದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಮೈಸೂರು ಉದ್ಯಮಿ ಅತ್ಮಹತ್ಯೆ.

ಮೈಸೂರು ಮೂಲದ ಉದ್ಯಮಿ ಕಿಕ್ಕೇರಿ ಹರ್ಷವರ್ಧನ್ ರಿಂದ ಕೃತ್ಯ. ಅಮೇರಿಕಾದ ನ್ಯೂ ಕ್ಯಾಸೆಲ್ ನಗರದ ನಿವಾಸದಲ್ಲಿ ಘಟನೆ. ಹರ್ಷವರ್ಧನ್ (57) ಪತ್ನಿ, ಪುತ್ರನನ್ನು ಕೊಂದು ಅತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಮತ್ತೊಬ್ಬ ಪುತ್ರ ಮನೆಯ ಹೊರಗಡೆ ಹೋಗಿದ್ದರಿಂದ ಬಚಾವ್ ಎಂದು ಅಮೆರಿಕಾ ಪೊಲೀಸರಿಂದ ಮಾಹಿತಿ. ಸದ್ಯ ಘಟನೆಗೆ ತಿಳಿಯದ ನಿಖರವಾದ ಕಾರಣ.

ಘಟನೆ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತಿರುವ ಅಮೇರಿಕಾ ಪೊಲೀಸರು, ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಕಿಕ್ಕೇರಿ ಗ್ರಾಮದ ಹರ್ಷವರ್ಧನ್. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ರೋಬೋಟ್ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಹರ್ಷವರ್ಧನ್, ಪ್ರಧಾನಿ ಮೋದಿ ಜೊತೆ ರೋಬೋಟ್ ಬಗ್ಗೆ ಚರ್ಚೆ ನಡೆಸಿದ್ದರು.

ಹೋಲೋ ವರ್ಡ್ಲ್ಸ್ ಕಂಪನಿ ಸ್ಥಾಪನೆ, ಕಂಪನಿಗೆ ಕ್ರಿಕೆಟಿಗ ಯುವರಾಜ್ ಸಿಂಗ್ ಬ್ರ್ಯಾಂಡ್‌  ಅಂಬಾಸಿಡರ್. ಮೈಸೂರಿನಲ್ಲಿ ಬ್ರಾಂಚ್ ಹೊಂದಿದ್ದ ಹರ್ಷವರ್ಧನ್. ಕೋವಿಡ್ ಹಿನ್ನಲೆ 2022 ರಲ್ಲಿ ಕಂಪನಿ ಕ್ಲೋಸ್ ಮಾಡಿ ಅಮೆರಿಕಕ್ಕೆ ವಾಪಸ್ ಹೋಗಿದ್ದರು ಎನ್ನಲಾಗಿದೆ.

key words: Mysuru techie, commits suicide, shooting wife, son in US, Kikkeri Harshavardhan

SUMMARY:

Mysuru techie commits suicide by shooting wife, son in US. The act was committed by Mysuru-based businessman Kikkeri Harshavardhan. The incident took place at his residence in Newcastle, USA. 57-year-old Harshvardhan kills wife, son and commits suicide.