ಹಫ್ತ ಬೆದರಿಕೆ ಅರೋಪ: “ಅವ್ವ” ಮಾದೇಶ್ ವಿರುದ್ಧ ಎಫ್‌ಐಆರ್ ದಾಖಲು.

FIR lodged against "Avva" Madhesh for threatening at jayalakshimipuram police station, Mysore.

ಮೈಸೂರು, ಏ.೨೯,೨೦೨೫: ಹಫ್ತ ಕೇಳಿದ ಆರೋಪದ ಮೇಲೆ ಜೆಡಿಎಸ್‌ ಮಾಜಿ ಕಾರ್ಪೋರೇಟರ್‌ ಅವ್ವ ಮಾದೇಶ್‌ ವಿರುದ್ಧ ಎಫ್.ಐ.ಆರ್.‌ ದಾಖಲು.

ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲು. ಕೃಷ್ಣಕಾಮಿ ರೆಡ್ಡಿ ಎಂಬಾತನಿಗೆ ಬೆದರಿಕೆ ಹಾಕಿದ ಆರೋಪ.

ಗೋಕುಲಂ‌ ಬಡಾವಣೆಯಲ್ಲಿ ಬರಿಸ್ಥಾ ಕೆಫೆ ತೆರೆಯಲು ಮುಂದಾಗಿದ್ದ ಮಂಚೇಗೌಡನಕೊಪ್ಪಲಿನ ನಿವಾಸಿ  ಕೃಷ್ಣಕಾಮಿ ರೆಡ್ಡಿ. ಕೆಫೆ ಆರಂಭಿಸಬೇಕಾದರೆ 5 ಲಕ್ಷ ರೂ.‌ ಹಣ ನೀಡಬೇಕು ಎಂದು ಬೆದರಿಕೆ. ನಾಗು ಎಂಬಾತ ಬಿಲ್ಡಿಂಗ್ ಬಳಿ ಬಂದು ಗಲಾಟೆ ಮಾಡಿದ್ದ ಎಂದು ಆರೋಪಿಸಿರುವ ರೆಡ್ಡಿ.

ಜತೆಗೆ ಅವ್ವ ಮಾದೇಶ್ ಸಹ ದೂರವಾಣಿ ಮೂಲಕ ಹೆದರಿಸಿದ್ದ, ಮನೆಗೆ ಬಾ ಎಂದು ಧಮ್ಕಿ ಹಾಕಿದ್ದಾನೆ . ಐದು ಲಕ್ಷ ಕೊಡುವವರಗೆ ಕೆಲಸ ಮಾಡಲು ಬಿಡಲ್ಲ ಎಂದು ಕೆಲಸ ನಿಲ್ಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪ. ಕಲಂ 308(2) ರೆವಿ 3/4 ಭಾರತೀಯ ನ್ಯಾಯ ಸಂಹಿತೆ ಪ್ರಕಾರ ದೂರು ದಾಖಲು.

“ಅವ್ವ” ಮಾದೇಶ ಹುಣಸೂರಿನ ಜೋಡಿ‌ ಕೊಲೆ ಆರೋಪಿಯಾಗಿದ್ದ ಜತೆಗೆ ಪಡುವಾರಹಳ್ಳಿ ದೇವು ಮರ್ಡರ್ ಕೇಸ್ ನಲ್ಲಿ ಪ್ರಮುಖ‌ ಆರೋಪಿ. ಹಲವು ವರ್ಷಗಳ ಕಾಲ‌ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿರುವ ಅವ್ವ ಮಾದೇಶ್.

key words: FIR, “Avva” Madhesh, threatening, jayalakshimipuram police station, Mysore.

FIR lodged against “Avva” Madhesh for threatening at jayalakshimipuram police station, Mysore.