ಚಾಮರಾಜನಗರ,ಏಪ್ರಿಲ್,30,2025 (www.justkannada.in): ತದಿಗೆ ಅಮವಾಸ್ಯೆ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರ ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಮೂರದೇ ದಿನದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ 1.52 ಕೋಟಿ ರೂ.ಆದಾಯ ಸಂಗ್ರಹವಾಗಿದೆ.
ತದಿಗೆ ಅಮವಾಸ್ಯೆ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಮಲೇ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದು, ಈ ನಡುವೆ ವಿವಿಧ ಸೇವಾ ಉತ್ಸವಗಳಿಂದಾಗಿ ಮಾದಪ್ಪನ ಸನ್ನಿಧಿಗೆ ಕೋಟ್ಯಾಂತರ ರೂಪಾಯಿ ಆದಾಯ ಬಂದಿದೆ.
1,192 ಚಿನ್ನದ ರಥೋತ್ಸವ, 70 ಬೆಳ್ಳಿ ರಥೋತ್ಸವ, 2767 ಹುಲಿವಾಹನ, 241 ರುದ್ರಾಕ್ಷಿ ಮಂಟಪ, 776 ಬಸವ ವಾಹನ ಉತ್ಸವಗಳನ್ನ ಭಕ್ತಾದಿಗಳು ನೆರವೇರಿಸಿದ್ದು, ಉತ್ಸವಗಳಿಂದ ಸುಮಾರು 48,58,712 ರೂ, ವಿವಿಧ ಸೇವೆಗಳಿಂದ 5,38,000, ಮಿಶ್ರ ಪ್ರಸಾದದಿಂದ 11,31,250 ರೂ, ಮಾಹಿತಿ ಕೇಂದ್ರದಿಂದ 5,37,300, ಲಡ್ಡು ಪ್ರಸಾದದಿಂದ 37,51,050 ಸೇರಿದಂತೆ ವಿವಿಧ ಸೇವೆಗಳಿಂದ ಮೂರೇ ದಿನಕ್ಕೆ 1,52,75,344 ರೂ ಆದಾಯ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Revenue collection, Rs. 1.52 crore.three days, Male Mahadeshwar Hill