ಪಹಲ್ಗಾಮ್ ಉಗ್ರರ ದಾಳಿ : ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವ ಮೀಟಿಂಗ್ ಆರಂಭ

ನವದೆಹಲಿ,ಏಪ್ರಿಲ್,30,2025 (www.justkannada.in): ಪಹಲ್ಗಾಮ್ ಉಗ್ರರ ದಾಳಿಯಿಂದ 26 ಮಂದಿ ಸಾವನ್ನಪ್ಪಿದ ಪ್ರಕರಣ  ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಮಹತ್ವದ ಸಭೆ ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಭೆ ನಡೆಯುತ್ತಿದ್ದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ಧೋವೆಲ್ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ, ಭದ್ರತಾ ಕ್ಯಾಬಿನೆಟ್ ಸಮಿತಿಯ (ಸಿಸಿಎಸ್) ಸಭೆ ನಡೆಸಲಾಗತ್ತು.  ಈ ಸಭೆಯ ನಂತರ, ಸಿಂಧೂ ಜಲ ಒಪ್ಪಂದದ ನಿಷೇಧ, ಅಟ್ಟಾರಿ ಗಡಿಯನ್ನು ಮುಚ್ಚುವುದು ಮತ್ತು ಪಾಕ್ ಜನರ ವೀಸಾಗಳನ್ನು ರದ್ದುಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಮಿಲಿಟರಿಯೇತರ ಕ್ರಮಗಳನ್ನು ಘೋಷಿಸಲಾಗಿತ್ತು.

ಇದೀಗ 3ನೇ ಮಹತ್ವದ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಏನುಕ್ರಮ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.

Key words: Pahalgam terror attack, Important meeting, PM Modi