ಮೈಸೂರು,ಅ,11,2019(www.justkannada.in): ದೇಶದ, ಪ್ರಬಲ ನಾಯಕರನ್ನ ಸದೆಬಡಿಯುವುದೇ ಮೋದಿ, ಆಮಿಷ ಶಾ ಪ್ಲಾನ್ ಆಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರನ್ನ ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಇದು ಬಿಜೆಪಿಯ ರಾಜಕೀಯ ಪ್ರೇರಿತ ದಾಳಿ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಕಿಡಿಕಾರಿದರು.
ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಮನೆ, ಶಿಕ್ಷಣ ಸಂಸ್ಥೆ ಹಾಗೂ ಆಸ್ತಿಗಳ ಮೇಲೆ ಐಟಿ ದಾಳಿ ಹಿನ್ನೆಲೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಆರ್ ಧ್ರುವನಾರಾಯಣ್ , ಐಟಿ ದಾಳಿ ತಪ್ಪು ಎಂದು ನಾವು ಹೇಳುತ್ತಿಲ್ಲ ಆದರೆ ದೇಶದಲ್ಲಿರುವ ವಿರೋಧ ಪಕ್ಷಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಪರಮೇಶ್ವರ್ ಅವರ ತಂದೆ ಗಂಗಾಧರಯ್ಯ ಅವರು ಗಾಂಧಿವಾದಿಗಳು ದಲಿತ ಸಮುದಾಯಕ್ಕೆ ಸೇರಿದವರು. 5O ವರ್ಷಗಳ ಹಿಂದೆಯೇ ಶಿಕ್ಷಣ ಸಂಸ್ಥೆಗಳನ್ನ ಪ್ರಾರಂಭಿಸಿದ್ದರು. ಮೈಸೂರಿನಲ್ಲಿ ಸಹ ಸಿದ್ದಾರ್ಥ ಶಿಕ್ಷಣ ಸಂಸ್ಥೆ ತೆರೆದಿದ್ದಾರೆ.ಗ್ರಾಮಾಂತರ ಪ್ರದೇಶಗಳ ಜನರಿಗೆ ಶಿಕ್ಷಣ ನೀಡಲು ಮುಂದಾಗಿದ್ದರು, ಅಂತಹ ಸಂಸ್ಥೆಗಳ ಮೇಲೆ ಈ ದಾಳಿ ರಾಜಕೀಯ ಪ್ರೇರಿತ ಎಂದು ಗುಡುಗಿದರು.
ಉತ್ತರ ಪ್ರದೇಶದಲ್ಲಿ ಮಾಯಾವತಿ ಹಾಗೂ ಅವರ ಕುಟುಂಬದವರನ್ನ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರುಗಳ ಮೇಲೆ ದಾಳಿ ಮಾಡ್ತಿದ್ದಾರೆ. ಐಟಿ ಅಧಿಕಾರಿಗಳು ಕೆಲವು ವಿಚಾರಗಳಲ್ಲಿ ಕೈ ಕಟ್ಟಿ ಕುಳಿತುಕೊಳ್ಳಲಿದ್ದಾರೆ, ಜನಾರ್ದನರೆಡ್ಡಿ ಮಗಳ ಮದುವೆ ವೈಭವವಾಗಿ ನಡೆಸಿದ್ರು ಅವರನ್ನ ಏನು ಮಾಡಲಿಲ್ಲ. ಗುಜರಾತ್ ನಲ್ಲಿ ಮೋದಿ ಸಿಎಂ ಆಗಿದ್ದಾಗ ವಿರೋಧ ಪಕ್ಷದ ನಾಯಕರ ಮನೆಗಳ ಮೇಲೆ ದಾಳಿ ನಡೆಸುವ ಪ್ರವೃತ್ತಿ ಬೆಳಿಸಿಕೊಂಡಿದ್ದರು. ಅದೇ ಈಗ ಮುಂದುವರಿಯುತ್ತಿದೆ, ದಮನಕಾರಿ ನೀತಿ, ಭಯ ಸೃಷ್ಟಿಸಿ ಈ ಕೆಲಸ ಮಾಡ್ತಿದ್ದಾರೆ, ಯಾರು ಒಳ್ಳೆ ಪ್ರಬಲ ನಾಯಕರಾಗಿ ಹೋಗ್ತಿದ್ದಾರೋ ಅಂತವರನ್ನ ಗುರಿಯಾಗಿಸಿಕೊಂಡು ದಾಳಿ ಮಾಡ್ತಿದ್ದಾರೆ. ಚುನಾವಣೆ ಸಮೀಪ ಹೊರ ಬರುತ್ತಿದ್ದ ಹಾಗೆ ಈ ರೀತಿ ಕೆಲಸ ಮಾಡಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ದ ಹರಿಹಾಯ್ದರು.
ಕೇವಲ ಮೂರು ದಿನಗಳ ಮಾತ್ರ ಅಧಿವೇಶನ ಕರೆದಿರೋದು ಕೆಲವು ಬಿಲ್ ಗಳನ್ನ ಪಾಸ್ ಮಾಡಿಕೊಳ್ಳೋಕೆ…
ಮೂರು ದಿನದ ಅಧಿವೇಶನದ ಬಗ್ಗೆ ಲೇವಡಿ ಮಾಡಿದ ಆರ್.ಧೃವನಾರಾಯಣ್, ಕೇವಲ ಮೂರು ದಿನಗಳ ಮಾತ್ರ ಅಧಿವೇಶನ ಕರೆದಿರೋದು ಕೆಲವು ಬಿಲ್ ಗಳನ್ನ ಪಾಸ್ ಮಾಡಿಕೊಳ್ಳೋಕೆ. ರಾಜ್ಯದಲ್ಲಿ ಈ ರೀತಿಯ ಪ್ರವಾಹ ಉಂಟಾಗಿದ್ದರೂ ಕೇವಲ ಮೂರೇ ದಿನ ಅಧಿವೇಶನ ಕರೆದಿದ್ದಾರೆ. ಬಿಜೆಪಿಯಿಂದ ಏನು ಕೆಲಸಗಳೇ ಆಗಿಲ್ಲ ಹೀಗಾಗಿ ಕೇವಲ ಮೂರು ದಿನಗಳು ಮಾತ್ರ ಅಧಿವೇಶನ ಕರೆದು ಬಿಲ್ ಗಳನ್ನ ಪಾಸ್ ಮಾಡ್ಕೊಳ್ತಿದ್ದಾರೆ. ವಿಶೇಷ ಅಧಿವೇಶನ ಕರಿಯಲೇ ಇಲ್ಲಾ. ಬೆಳಗಾವಿ ಅಧಿವೇಶನವನ್ನು ಕರೆಯಲಿಲ್ಲ, ಈ ಮೂಲಕ ಪ್ರಾದೇಶಿಕ ಅಸಮತೋಲನ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಿಂದ ಮಾಧ್ಯಮದವರನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕೆಲಸ
ಇದೇ ವೇಳೇ ಅಧಿವೇಶನಕ್ಕೆ ಮಾಧ್ಯಮಗಳನ್ನ ನಿಷೇಧಿಸಿರುವುದನ್ನ ಖಂಡಿಸಿದ ಮಾಜಿ ಸಂಸದ ಆರ್. ಧ್ರುವನಾರಾಯಣ್, ಬಿಜೆಪಿ ಮಾದ್ಯಮಗಳನ್ನ ಹೊರಗಿಡುವ ಮೂಲಕ ಮಾಧ್ಯಮದವರನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಕಸಿದು ಕೊಳ್ಳುತ್ತಿದ್ದಾರೆ.ಇದನ್ನು ನಾವು ಸಹಿಸೋದಿಲ್ಲ. ತಮ್ಮ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಈ ಕೃತ್ಯಕ್ಕೆ ಮುಂದಾಗಿದ್ದಾರೆ.ನಾವು ಈ ವಿಚಾರವನ್ನ ಉಗ್ರವಾಗಿ ಖಂಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
Key words: mysore- Former MP- Dhruvanarayan-Condemnation – media -restriction – session.