ಮೈಸೂರು, ಮೇ 15, 2019 (www.justkannada.in news) : ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಟಿ. ಚಿದಾನಂದ (೭೧) ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು.
ಡಾ. ಚಿದಾನಂದ ಅವರಿಗೆ ಪತ್ನಿ ಟಿ. ಹೇಮಾವತಿ, ಪುತ್ರರಾದ ಡಾ. ರವಿ, ಚಂದ್ರು ಇದ್ದಾರೆ. ಪತ್ನಿ ಹೇಮಾವತಿ ಅವರು ನಗರಪಾಲಿಕೆ ಮಾಜಿ ಸದಸ್ಯೆ ಜತೆಗೆ ನೋಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿದಾನಂದ ಅವರು ಈ ಹಿಂದೆ ಶಿವಮೊಗ್ಗ ವೈದ್ಯಕೀಯ ಕಾಲೇಜು ಮತ್ತು ಮಂಡ್ಯ ವೈದ್ಯಕೀಯ ಕಾಲೇಜಿನ ಡೀನ್ ಆಗಿ ಕಾರ್ಯನಿರ್ವಹಿಸಿದ್ದರು.
ವೈದ್ಯಕೀಯ ಲೇಖಕರಾಗಿ ಗುರುತಿಸಿಕೊಂಡಿದ್ದ ಡಾ.ಚಿದಾನಂದ ಅವರು ರಚಿಸಿದ್ದ ‘ಚರ್ಬಿ ಊಟ ಹೃದಯ ಸ್ಫೋಟ’ ಪುಸ್ತಕ ಜನಪ್ರಿಯತೆ ಪಡೆದಿತ್ತು.
ಮೃತರ ದೇಹವನ್ನು ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
–
mandya medical college retired deen dr. chidananda died today due to heart attack, family members desided to donate the body to mysore medicle college.