ಮೈಸೂರು,ಮೇ,15,2019(www.justkannada.in): ಸೇವಾ ಹಿರಿತನವನ್ನ ಪರಿಗಣಿಸುವಂತೆ ಆಗ್ರಹಿಸಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಮೌಲ್ಯಮಾಪಕರು ದಿಢೀರ್ ಪ್ರತಿಭಟನೆ ನಡೆಸಿದರು.
ಇಂದು ನಡೆಯುತ್ತಿದ್ದ ಮೌಲ್ಯಮಾಪನವನ್ನ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ದಿಢೀರ್ ಪ್ರತಿಭಟನೆ ಕುಳಿತರು. ಮೌಲ್ಯ ಮಾಪನ ವಿಚಾರದಲ್ಲಿ ಯುಜಿಸಿ ಹಾಗೂ ನಾನ್ ಯುಜಿಸಿ ಎಂದು ತಾರತಮ್ಯ ಮಾಡಲಾಗ್ತಿದೆ. ನಮ್ಮ ಸೇವಾ ಹಿರಿತನವನ್ನ ಪರಿಗಣಿಸಿ ಮೌಲ್ಯಮಾಪನದಲ್ಲಿ ನಮಗೆ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.
ಬೇರೆ ವಿಭಾಗದಲ್ಲಿ ಈ ರೀತಿಯ ಗೋಂದಲ ಇಲ್ಲ. ಆದ್ರೆ ಕನ್ನಡ ವಿಭಾಗದಲ್ಲಿ ಈ ಗೊಂದಲ ಸೃಷ್ಠಿ ಮಾಡಲಾಗಿದೆ.. ಗೊಂದಲ ನಿವಾರಣೆಯಾಗುವವರೆಗೂ ಮೌಲ್ಯ ಮಾಪನ ಮಾಡುವುದಿಲ್ಲವೆಂದು ಅಥಿತಿ ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಕೂಡಲೇ ಗೊಂದಲ ನಿವಾರಣೆ ಮಾಡುವಂತೆ ಒತ್ತಾಯಿಸಿದ್ದಾರೆ.
Key words: protest – evaluators- Mysore University.