ಬೆಂಗಳೂರು,ಅ,15,2019(www.justkannada.in): ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಓಂ ಪ್ರಕಾಶ್ ಅವರನ್ನ ತಮ್ಮ ಅಧಿಕೃತ ಸಲಹೆಗಾರರಾಗಿ ನೇಮಿಸಿಕೊಳ್ಳುವ ಮೂಲಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ.
ಸ್ಪೀಕರ್ ನೂತನ ಸಲಹೆಗಾರನನ್ನಾಗಿ ನೇಮಿಸಿಕೊಳ್ಳುವ ಮೂಲಕ, ಕರ್ನಾಟಕ ವಿಧಾನಸಭೆಯಲ್ಲಿ ಹೊಸ ಇತಿಹಾಸ ಸೃಷ್ಠಿ ಮಾಡಿದ್ದಾರೆ. ವಿಧಾನಸಭೆ ಸ್ಪೀಕರ್ ಅವರ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಓಪ್ರಕಾಶ್ ಅವರನ್ನು ನೇಮಿಸಿಕೊಂಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ವಿಧಾನಸಭೆಯ ಇತಿಹಾಸದಲ್ಲೇ ಇದೇ ಮೊದಲಿ ಬಾರಿಗೆ ಈ ರೀತಿ ಸಲಹೆಗಾರರನ್ನ ನೇಮಿಸಿಕೊಂಡಿದ್ದಾರೆ.
ನಿವೃತ್ತ ಕಾರ್ಯದರ್ಶಿಯನ್ನ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಕ್ಕೆ ಸಚಿವಾಲಯದಲ್ಲೇ ಸ್ಪೀಕರ್ ವಿರುದ್ದ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಇನ್ನೂ ಸ್ಪೀಕರ್ ಕಾಗೇರಿಯವರಿಗೆ ಅನುಭವದ ಕೊರತೆಯೋ ಅಥವಾ ಸಚಿವಾಲಯದ ಅಧಿಕಾರಿಗಳ ಮೇಲಿನ ಅಪನಂಬಿಕೆಯಿಂದ ಹೀಗೆ ತಮ್ಮ ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೋ ಎಂಬ ಪ್ರಶ್ನೆ ಮೂಡಿದೆ.
Key words: Speaker -Vishweshwara Hegde Kageri – new tradition-Omprakash -appointed -Advisor