ICC Ranking: ನಂ.1 ಸ್ಥಾನದಿಂದ ಕೆಳಗಿಳಿದ ಸ್ಮತಿ ಮಂಧಾನ

ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಐಸಿಸಿ ಮಹಿಳಾ ಏಕದಿನ Rankingನಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ನ್ಯೂಝಿಲ್ಯಾಂಡ್‌ನ ಆಟಗಾರ್ತಿ ಆಯಮಿ ಸ್ಯಾಟರ್ಥ್‌ವೇಟ್ ನಂ.1 ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಗಾಯದ ಸಮಸ್ಯೆ ಎದುರಿಸುತ್ತಿರುವ ಸ್ಮತಿ ಮಂಧಾನ ಸೋಮವಾರ ಕೊನೆಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಏಕದಿನ ಸರಣಿಯಿಂದ ಹೊರಗುಳಿದಿದ್ದರು.

755 ಅಂಕ ಗಳಿಸಿರುವ ಸ್ಮತಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.