ಮೈಸೂರು,ಮೇ,16,2019(www.justkannada.in): ಮೈಸೂರಿನಲ್ಲಿ ಮನಿ ಡಬ್ಲಿಂಗ್ ದಂಧೆಯಲ್ಲಿ ತೊಡಗಿದವರ ಮೇಲೆ ಪೊಲೀಸರು ಶೂಟೌಟ್ ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಮೈಸೂರಿನ ಹೆಬ್ಬಾಳ್ ರಿಂಗ್ ರಸ್ತೆ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ವಿಜಯನಗರ ಠಾಣಾ ಪೊಲೀಸರು ಶೂಟೌಟ್ ನಡೆಸಿದ್ದಾರೆ. ಮನಿ ಡಬ್ಲಿಂಗ್ ನಲ್ಲಿ ತೊಡಗಿದ್ದ ಬಾಂಬೆ ಮೂಲದ ವ್ಯಕ್ತಿಗಳ ಮೇಲೆ ಶೂಟೌಟ್ ಆಗಿದೆ.
ಪೈರಿಂಗ್ ನಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
Key words: Shootout- police – Mysore-One person -dead.