ಮೈಸೂರು,ಅ,21,2019(www.justkannada.in): ಹುಣಸೂರು ಉಪಚುನಾವಣೆ ಹಿನ್ನೆಲೆ ನಾನಂತೂ ಸದ್ಯಕ್ಕೆ ತಟಸ್ಥನಾಗಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಜಿ. ಟಿ ದೇವೇಗೌಡ. ಹುಣಸೂರು ಉಪ ಚುನಾವಣೆ ಸಂಬಂಧ ಎಲ್ಲಾಪಕ್ಷದ ಅಭ್ಯರ್ಥಿಗಳು, ನಾಯಕರು ಸಿದ್ದತೆಯಲ್ಲಿ ತೊಡಗಿದ್ದಾರೆ. ಆದರೆ ನಾನಂತೂ ತಟಸ್ಥವಾಗಿರುತ್ತೇನೆ ಎಂದು ಮತ್ತೆ ಪುನರುಚ್ಚರಿಸಿದರು.
ಎಚ್ ವಿಶ್ವನಾಥ್ ಹಾಗೂ ಸಾ. ರಾ ಮಹೇಶ್ ಆಣೆ ಪ್ರಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ಚಾಮುಂಡಿಬೆಟ್ಟದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಇಂತಹ ಆಣೆ ಪ್ರಮಾಣಕ್ಕೆ ಜಿಲ್ಲಾಡಳಿತ, ಹಿರಿಯ ಅಧಿಕಾರಿಗಳು ಅವಕಾಶ ಮಾಡಿ ಕೊಡಬಾರದಿತ್ತು. ಇಬ್ಬರೂ ಹಿರಿಯ ನಾಯಕರು ಈ ರೀತಿಯ ರಾಜಕಾರಣಕ್ಕೆ ತಾಯಿಯ ಸನ್ನಿಧಾನವನ್ನು ಬಳಸಿಕೊಂಡಿದ್ದು ತಪ್ಪು. ಮುಂದಿನ ದಿನಗಳಲ್ಲಿ ಈ ರೀತಿಯ ಆಣೆ ಪ್ರಮಾಣಗಳಿಗೆ ಅವಕಾಶ ಮಾಡಿ ಕೊಡಬಾರದು. ಈ ಕುರಿತು ನಾನು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.
ಸಾ.ರಾ ಮಹೇಶ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ಸಾ.ರಾ ಮಹೇಶ್ ಯಾವ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಆ ವಿಚಾರ ಏನೆಂದು ನನಗೆ ತಿಳಿದಿಲ್ಲ ಎಂದು ತಿಳಿಸಿದರು.
Key words:Hunsuru- by-election-MLA- GT Deve Gowda – neutral