ನವದೆಹಲಿ,ಅ,22,2019(www.justkannada.in): ಐಎನ್ ಎಕ್ಸ್ ಮಿಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪಿ.ಚಿದಂಬರಂಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ. ಹೌದು ಸಿಬಿಐ ಕೇಸ್ ನಲ್ಲಿ ಮಾತ್ರ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಇಡಿ ಬಂಧನದಲ್ಲಿದ್ದು ಬಿಡುಗಡೆ ಸಾಧ್ಯವಾಗಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಕಳೇದ 49 ದಿನಗಳಿಂದ ತಿಹಾರ್ ಜೈಲಿನಲ್ಲಿದ್ದಾರೆ. ಚಿದಂಬರಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಪಡೆದಿದ್ದ ಸಿಬಿಐ ಅವರನ್ನು ತಿಹಾರ್ ಜೈಲಿನಲ್ಲಿಟ್ಟು ಅಕ್ರಮ ಹಣ ವರ್ಗಾವಣೆ ಸಂಬಂಧ ನಿರಂತರ ವಿಚಾರಣೆಗೊಳಪಡಿಸಿತ್ತು. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಪಿ. ಚಿದಂಬರಂ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ಗೆ ಸತತ ಅರ್ಜಿ ಸಲ್ಲಿಸಿದ್ದರು. ಪಿ.ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ಇಡಿ ಇಲಾಖೆಯ ಬಂಧನದಿಂದಲೂ ಚಿದಂಬರಂ ಅವರಿಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದ್ದರು.
Key words: Former Union minister- P Chidambaram -granted- bail-suprmecourt