ಮೈಸೂರು,ಅ,26,2019(www.justkannada.in): ರಾಜ್ಯದಲ್ಲಿ ಡಿಸೆಂಬರ್ 5 ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಈ ವೇಳೆಯೇ ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ರಂಗೇರಿದೆ.
ಹೌದು, ನವೆಂಬರ್ 16 ಕ್ಕೆ ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತು ಉಪಮೇಯರ್ ಶಫಿ ಅಹಮ್ಮದ್ ರ ಅವಧಿ ಮುಕ್ತಾಯವಾಗಲಿದ್ದು ಬೈ ಎಲೆಕ್ಷನ್ ವೇಳೆಯೇ ಮೈಸೂರಿನಲ್ಲಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ರಂಗೇರಲಿದೆ. ನವೆಂಬರ್ 17 , 2018 ರಲ್ಲಿ ಮೇಯರ್ ಆಗಿ ಪುಪ್ಷಲತಾ ಜಗನ್ಬಾಥ್ – ಉಪಮೇಯರ್ ಆಗಿ ಶಪಿ ನೇಮಕವಾಗಿದ್ದರು. ಇದೀಗ ಅವರ ಒಂದು ವರ್ಷದ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಈಗಾಗಲೇ ಮೈತ್ರಿಮಾಡಿಕೊಂಡು ಕಾಂಗ್ರೆಸ್- ಜೆಡಿಎಸ್ ಪಾಲಿಕೆ ಗದ್ದುಗೆ ಹಿಡಿದಿದ್ದು, ರಾಜ್ಯದಲ್ಲಿ ಮೈತ್ರಿ ಮುರಿದುಕೊಂಡಿರುವ ಹಿನ್ನೆಲೆ ಮೇಯರ್- ಉಪಮೇಯರ್ ಚುನಾವಣೆಯಲ್ಲೂ ಮುಂದುವರಿಯುತ್ತಾ ಮೈತ್ರಿ..? ಎಂಬ ಕುತೂಹಲ ಮೂಡಿದೆ.
ಇನ್ನು ನವೆಂಬರ್ 16 ರ ನಂತರ ನಗರಾಭಿವೃದ್ಧಿ ಇಲಾಖೆ ಮೇಯರ್- ಉಪಮೇಯರ್ ಮೀಸಲಾತಿ ಪ್ರಕಟ ಮಾಡಲಿದ್ದು, ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಇನ್ನು ಮೇಯರ್- ಉಪಮೇಯರ್ ಚುಮಾವಣೆ ಮೇಲೂ ಬೈ ಎಲೆಕ್ಷನ್ ನ ನೀತಿ ಸಂಹಿತೆಯ ಕರಿನೆರಳು ಕೂಡ ಇದೆ. ಒಂದು ವೇಳೆ ನೀತಿ ಸಂಹಿತೆ ಜಾರಿಯಾದರೆ ಬೈ ಎಲೆಕ್ಷನ್ ನಂತರವೇ ಮೇಯರ್- ಉಪಮೇಯರ್ ಚುನಾವಣೆ ನಡೆಯಲಿದೆ. ಅಲ್ಲಿಯ ತನಕವೂ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಮುಂದುವರಿಯುವ ಸಾಧ್ಯತೆ ಇದೆ ಇದರೊಂದಿಗೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.
Key words: mysore city corporation- Mayor— Deputy Mayor- election