ಮೈಸೂರು, ಅಕ್ಟೋಬರ್ 27, 2019 (www.justkannada.in): ಎಚ್.ಡಿ. ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ನಡೆಯುತ್ತಿರೋ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ನೀತಿ ಪಾಠ ಮಾಡಿದ್ದಾರೆ.
ಬಡವರ ದುಡ್ಡು ಹೊಡೀಬೇಡಿ. ಕಂದಾಯ ಇಲಾಖೆಯವರು ದುಡ್ಡು ಹೊಡೀತೀರಿ ಅಂತಾನೆ ರಾಜೀವ್ ಹೌಸಿಂಗ್ ಸ್ಕೀಮ್ ನಲ್ಲಿ ಅನುದಾನ ಆರ್.ಟಿ.ಜಿ.ಎಸ್ ಮಾಡ್ತಿರೋದು. ಬಡವರ ಹಣಕ್ಕೆ ಸರಿಯಾಗಿ ಲೆಕ್ಕ ಕೊಡದಿದ್ರೆ ಕೆಲಸ ಕಳೆದುಕೊಳ್ತೀಯಾ ಎಂದು ತಾಲೂಕು ತಹಸೀಲ್ದಾರ್ ಸಚಿವ ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳಿಗೆ ಸ್ವಂತ ಖರ್ಚಿನಲ್ಲಿ ತಿಂಡಿ ಕೊಡಿಸಿ ಸಭೆ ಮಾಡೋ ಸಚಿವರನ್ನು ಎಲ್ಲಾದ್ರು ನೋಡಿದ್ದೀರಾ? ಆ ಕೆಲಸ ನಾನು ಮಾಡ್ತಿದ್ದೀನಿ, ನನ್ನ ಕಾಳಜಿಯನ್ನ ಅಧಿಕಾರಿಗಳು ಅರ್ಥ ಮಾಡಿಕೊಳ್ಳಿ. ಹಲವಾರು ದಶಕದಿಂದ ಈ ತಾಲೂಕು ಅಭಿವೃದ್ದಿಯಾಗಿಲ್ಲ. ಅಧಿಕಾರಿಗಳು ಸರಿಯಾಗಿದ್ರೆ ಎಲ್ಲವೂ ಸರಿ ಇರುತ್ತೆ ಎಂದು ಸೋಮಣ್ಣ ಹೇಳಿದ್ದಾರೆ.
ಯಾರು ಕೆಲಸ ಮಾಡಲ್ಲ ಅವರನ್ನು ನನ್ನ ಥರಾ ಜೊತೆಯಲ್ಲೇ ಕಾಲ್ನಡಿಗೆಯಲ್ಲೇ ಕಿ.ಮಿ.ಗಟ್ಟಲೆ ದೂರ ಸುತ್ತಾಡಿಸಿ. ಆಗ ಇವರಿಗೆ ಕಷ್ಟ ಅರ್ಥ ಆಗುತ್ತೆ ಎಂದು ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದುಗೆ ಅಧಿಕಾರಿಗಳನ್ನ ಟ್ರ್ಯಾಕ್ ಗೆ ತರೋಕೆ ಸಚಿವರು ಟಿಪ್ಸ್ ನೀಡಿದರು.