ಮೈಸೂರು,ನ,1,2019(www.justkannada.in): ನಾನು ತೆರೆದ ಪುಸ್ತಕ. ಜಿಲ್ಲಾಧಿಕಾರಿ ಗಳು ರಜೆ ಮೇಲೆ ತೆರಳಿದ್ರು. ಹೀಗಾಗಿ ಲೆಕ್ಕ ಕೊಡುವ ವಿಚಾರ ತಡವಾಗಿದೆ. ನಾಡ ಹಬ್ಬದ ದಸರಾದ ಲೆಕ್ಕ ಕೊಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಅರಮನೆಯ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದ ಸಚಿವ ಸೋಮಣ್ಣ, ಜಿಲ್ಲಾಧಿಕಾರಿಗಳು ರಜೆ ಮೇಲೆ ತೆರಳಿದ ಹಿನ್ನೆಲೆ ಲೆಕ್ಕ ಕೊಡುವ ವಿಚಾರ ತಡವಾಗಿದೆ.. ಇನ್ನೆರಡು ದಿನಗಳಲ್ಲಿ ದಸರಾ ಹಬ್ಬದ ಲೆಕ್ಕ ಕೊಡುತ್ತೇನೆ ಮಳೆ ಯಿಂದಾಗಿ ಕಾಮಗಾರಿ ತಡವಾಗಿದೆ. ಶೀಘ್ರವೇ ಗುಂಡಿ ಮುಚ್ಚುವ ಕಾರ್ಯವನ್ನು ಸಮರೋಪದಿಯಲ್ಲಿ ಮಾಡಲಾಗುವುದು. ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜ ಹಾರಿಸುವ ಆದೇಶದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಮೊದಲು ರಾಷ್ಟ್ರಧ್ವಜ ಹಾರಿಸಿ ನಂತರ ಭುವನೇಶ್ವರಿ ತಾಯಿ ಧ್ವಜ ಹಾರಿಸಲಾಗುತ್ತೆ. ರಾಜ್ಯದ ಮೂಲೆ ಮೂಲೆಯಲ್ಲಿ ಎರಡೂ ಧ್ವಜ ಹಾರಿಸಲಾಗುತ್ತೆ ಎಂದರು.
ಪ್ರತ್ಯೇಕ ನಾಢಧ್ವಜದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಅದಕ್ಕಾಗಿ ಹೋರಾಡುತ್ತಿರುವವರು, ಕರವೇ ನಾರಾಯಣಗೌಡ ಸೇರಿದಂತೆ ವಿವಿಧ ಸಂಘಟನೆಗಳ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದರು.
Key words: mysore- Minister -V. Somanna- statement –dasara festival