ಬೆಂಗಳೂರು, ನವೆಂಬರ್ 07, 2019 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಎರಡು ಡಿಫರೆಂಟ್ ಶೇಡ್ನಲ್ಲಿ ನಟಿಸಿರುವ ‘ಆ ದೃಶ್ಯ’ ಈ ವಾರ ಬಿಡುಗಡೆಯಾಗುತ್ತಿದೆ.
ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ಡಾ.ಶಿವರಾಜ್ಕುಮಾರ್ ನಟನೆಯ ಆಯುಷ್ಮಾನ್ಭವ ಚಿತ್ರವು ನವೆಂಬರ್ 15 ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಆ ಚಿತ್ರಕ್ಕೆ ನೆರವಾಗಲೆಂದು ಡಾ.ರವಿಚಂದ್ರನ್ ಅವರು ನಟಿಸಿರುವ ಆ ದೃಶ್ಯ ಚಿತ್ರವು ಇದೇ ವಾರ ಬಿಡುಗಡೆಯಾಗುತ್ತಿದೆ.
ನಿರ್ಮಾಪಕ ಕೆ.ಮಂಜು ಅವರು ನಿರ್ಮಿಸಿರುವ ಆ ದೃಶ್ಯವು ಒಂದು ಮರ್ಡರ್ ಮಿಸ್ಟರಿಯಾಗಿದ್ದು , ಕೊಲೆ ಯಾತಕ್ಕೆ , ಯಾರು ಮಾಡಿದ್ದರು ಎಂಬ ಅನೇಕ ಸ್ವಾರಸ್ಯಕರವನ್ನು ಹೊಂದಿರುವ ಈ ಚಿತ್ರದಲ್ಲಿ ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರವು ಚಿತ್ರದಲ್ಲಿದೆ.