ಹಾವೇರಿ,ನ,7,2019(www.justkannada.in): ಪುತ್ರನ ಕಂಪನಿಗೆ ಮೋಡಬಿತ್ತನೆ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಗೋವಿಂದ ಕಾರಜೊಳ, ನಾನು ಎಂದೂ ಸಹ ಪ್ರಭಾವ ಬೀರಿಲ್ಲ. ಬೀರೋದು ಇಲ್ಲ ಎಂದು ಹೆಳಿದ್ದಾರೆ.
ಹಾವೇರಿಯಲ್ಲಿ ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಮೋಡಬಿತ್ತನೆ ನಮ್ಮ ಸರ್ಕಾರ ಮಾಡಿದ ಕಾರ್ಯಕ್ರಮವಲ್ಲ. ಮೋಡಬಿತ್ತನೆ ಮಾಡಬೇಕೋ ಬೇಡವೂ ಎಂದು ನಾವು ಹೇಳಲು ಆಗಲ್ಲ. ಅದನ್ನ ವಿಜ್ಞಾನಿಗಳು ಹೇಳಬೇಕು. ಮೋಡಬಿತ್ತನೆ ಬೇಕೋ ಬೇಡವೂ ಎಂದು ಅವರೇ ಹೇಳ್ತಾರೆ. ಮೋಡಬಿತ್ತನೆ ಗುತ್ತಿಗೆ ಬಗ್ಗೆ ಹಿಂದಿನ ಸರ್ಕಾರವನ್ನ ಕೇಳಿ. ನನ್ನ ಪುತ್ರನ ಕಂಪನಿಗೆ ಗುತ್ತಿಗೆ ವಿಚಾರದಲ್ಲಿ ನಾನು ಪ್ರಭಾವ ಬೀರಲ್ಲ ಎಂದು ತಿಳಿಸಿದರು.
ಹಾಗಯೇ ಮೋಡ ಬಿತ್ತನೆಗೆ ಸಚಿವ ಕೆ.ಎಸ್ ಈಶ್ವರಪ್ಪ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ಕೆ.ಎಸ್ ಈಶ್ವರಪ್ಪ ಮೋಡ ಬಿತ್ತನೆ ಬೇಡ ಎಂದು ಹೇಳಿಲ್ಲ. ಅವರು ಹೇಳಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
Key words: Cloud sowing -Lease- – son’- company- DCM Govinda Karajola