ಹಾವೇರಿ,ನ,7,2019(www.justkannada.in): ಯುಬಿ ಬಣಕಾರ್ ಮತ್ತು ಬಿ.ಸಿ ಪಾಟೀಲ್ ಜೋಡೆತ್ತುಗಳಿದ್ದಂತೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಹಿರೆಕೇರೂರಿನಲ್ಲಿ ಇಂದು ಆಯೋಜಿಸಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದರು. ಯು.ಬಿ. ಬಣಕಾರ ಮತ್ತು ಬಿ.ಸಿ. ಪಾಟೀಲ್ ಒಂದಾದ ಬಳಿಕ ನಾನು ಮತ್ತೊಮ್ಮೆ ಇಲ್ಲಿಗೆ ಬರುವ ಅಗತ್ಯವಿಲ್ಲ. ಉಪಚುನಾವಣೆಯ ಚುನಾವಣಾ ಪ್ರಚಾರಕ್ಕೆ ಈ ಜೋಡೆತ್ತುಗಳೇ ಸಾಕು ಎಂದು ತಿಳಿಸಿದರು.
ಯುಬಿ ಬಣಕಾರ್ ಮತ್ತು ಬಿ.ಸಿ ಪಾಟೀಲ್ ಅವರಿಬ್ಬರೂ ನನ್ನ ಕಣ್ಣುಗಳಿದ್ದಂತೆ . ಹಿರೇಕೆರೂರಿನಲ್ಲಿ ಬಣಕಾರ್ ಗೆ ಅವಮಾನ ಆಗದಂತೆ ನೋಡಿಕೊಳ್ಳುತ್ತೇವೆ. ಕ್ಷೇತ್ರದಲ್ಲಿ ಈ ಇಬ್ಬರು ನಾಯಕರು ಒಟ್ಟಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಬಿಜೆಪಿ ಬಿಟ್ಟು ಬೇರೆ ಪಕ್ಷ ಬರಲು ಸಾಧ್ಯವೇ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಹಿರೇಕೆರೂರು ಉಪ ಚುನಾವಣೆಗೆ ಹಿನ್ನೆಲೆ ಅನರ್ಹ ಶಾಸಕ ಬಿ.ಸಿ ಪಾಟೀಲ್ ಗೆ ಟಿಕೆಟ್ ನೀಡಲು ಮುಂದಾದ ಹಿನ್ನೆಲೆ ಯುಬಿ ಬಣಕಾರ್ ಬಂಡಾಯವೇಳುವ ಸಾಧ್ಯತೆ ಇತ್ತು.
Key words: haveri- Ub Banakar –BC Patil –pair-CM BS Yeddyurappa