ಬೆಂಗಳೂರು, ನ.19,2019(www.justkannada.in): ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ಗೋಕಾಕ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಪಿ .ಬಚ್ಚೇಗೌಡ ಅವರ ನಾಮಪತ್ರಗಳು ತಿರಸ್ಕಾರವಾಗಿದೆ.
ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಸಲ್ಲಿಸಿದ್ದ ನಾಮಪತ್ರ ಮತ್ತು ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಕೆಪಿ ಬಚ್ಚೇಗೌಡ ಸಲ್ಲಿಸಿದ್ದ ನಾಮಪತ್ರ ಇಂದು ಪರಿಶೀಲನೆ ವೇಳೆ ತಿರಸ್ಕೃತಗೊಂಡಿವೆ. ಸತೀಶ್ ಜಾರಕಿಹೋಳಿ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರೂ, ಅವರು ನಾಮಪತ್ರದ ಜತೆ ಬಿ ಫಾರ್ಮ್ ಸಲ್ಲಿಸಿರಲಿಲ್ಲ. ಈ ಕಾರಣಕ್ಕಾಗಿ ನಾಮಪತ್ರ ತಿರಸ್ಕೃತಗೊಂಡಿದೆ.
ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಠ ಅವರ ನಾಮಪತ್ರ ಊರ್ಜಿತವಾಗಿದೆ. ಈ ಮೊದಲು ಕೆ.ಪಿ ಬಚ್ಚೇಗೌಡ ಅವರನ್ನ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ ತಡರಾತ್ರಿ ಕೆ.ಪಿ ಬಚ್ಚೇಗೌಡ ಅವರನ್ನು ಬದಲಾಯಿಸಿರುವ ಜೆಡಿಎಸ್ ಶಿಡ್ಲಘಟ್ಟ ತಾಲೂಕು ನಾಗಮಂಗಲ ನಿವಾಸಿ ರಾಧಾಕೃಷ್ಣ ಅವರಿಗೆ ಮಣೆ ಹಾಕಿತ್ತು, ಈ ನಡುವೆ ನಾಮಪತ್ರ ಸಲ್ಲಿಸುವ ವೇಳೆ ಒಂದೇ ಬಿ ಫಾರ್ಮ್ ನಲ್ಲಿ ಇಬ್ಬರು ಹೆಸರು ಬರೆದು ಸಲ್ಲಿಸಲಾಗಿತ್ತು.
Key words: Satish Jarakiiholi –Chikkaballapur- JDS candidate-kp Bachegowda -nomination -rejection.