ದಕ್ಷಿಣ ಕನ್ನಡ,ಮೇ,18,2019(www.justkannada.in): ಅರಣ್ಯನಾಶದಿಂದ ನೀರಿಗೆ ಬರ ಉಂಟಾಗಿದೆ. ನೇತ್ರಾವತಿ ನದಿಯಲ್ಲಿ ನೀರು ಇಂಗುತ್ತಿರುವ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಧರ್ಮಸ್ಥಳ ಸನ್ನಿಧಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ ಅವರು, ತೀರ್ಥಗುಂಡಿಯಲ್ಲಿ ನಾಲ್ಕು ಅಡಿ ನೀರು ಕಡಿಮೆಯಾಗಿದೆ. ಅದು ಖಾಲಿಯಾದರೇ ದೇವರಿಗೂ ನೀರಿನ ಬರದ ಬಿಸಿ ತಟ್ಟಬಹುದು. ನೇತ್ರಾವತಿ ನದಿ ಪೂರಕ ನದಿ ನೀರು ಕಡಿಮೆಯಾಗುತ್ತಿದೆ. ಸಕಲೇಶಪುರದ ಬಳಿ ಅರಣ್ಯನಾಶವಾಗಿದ್ದು ಇದು ಹೇಮಾವತಿ ನದಿ ಬರಡುಗೊಳಿಸಿದೆ. ಈ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನೀರಿಗೆ ಕೊರತೆ ಉಂಟಾಗಲಿದೆ ಎಂದರು.
ನಮಗೆ ಮೇಲಿನ ಘಟ್ಟಭಾಗದಿಂದ ನೀರು ಹರಿದು ಬರಬೇಕು. ಆದರೆ ಅಲ್ಲಿ ಮಳೆಯಾಗಿಲ್ಲ. ಹೀಗಾಗಿ ನಮಗೆ ನೀರಿಲ್ಲ. ಇನ್ನು 10 ದಿನಗಳ ಕಾಲ ಮಳೆಯಾಗಲ್ಲ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ ಎಂದು ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು. ಅಲ್ಲದೆ ನೀರಿನ ಕೊರತೆ ಹಿನ್ನೆಲೆ ಸ್ವಲ್ಪ ದಿನಗಳ ಕಾಲ ತಮ್ಮ ಪ್ರವಾಸವನ್ನ ಮುಂದೂಡಿ ಎಂದು ಮತ್ತೆ ಮನವಿ ಮಾಡಿದರು.
Key words: Drought to the waters – Dr Veerendra Hegde pressmeet in darmasthala
#Drought #DrVeerendraHegde #darmasthala