ಬೆಂಗಳೂರು,ನ,22,2019(www.justkannada.in): ಡಿಸೆಂಬರ್ 5 ರಂದು ಹೊಸಕೋಟೆ ಉಪಚುನಾವಣೆ ಹಿನ್ನೆಲೆ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ವಿರುದ್ದ ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡರನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಈ ನಡುವೆ ಸಂಸದ ಬಚ್ಚೇಗೌಡರ ವಿರುದ್ದ ಪುತ್ರನ ಪರ ಮತ ಕೇಳಿರುವ ಆರೋಪ ಮಾಡಲಾಗಿದ್ದು ಈ ಬಗ್ಗೆ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಪುತ್ರ ಶರತ್ ಬಚ್ಚೇಗೌಡರ ಪರ ಮತಹಾಕುವಂತೆ ಬಚ್ಚೇಗೌಡ ಹೇಳಿದ್ದಾರೆ. ಯಾರಿಗೆಲ್ಲಾ ಪುತ್ರನಿಗೆ ವೋಟ್ ಹಾಕುವಂತೆ ಹೇಳಿದ್ದಾರೆ ಎಂಬುದು ಗೊತ್ತು. ಹೀಗಾಗಿ ಕೇಂದ್ರ ಸರ್ಕಾರ ಸಂಸದ ಬಚ್ಚೇಗೌಡರ ಮೇಲೆ ಕಣ್ಣಿಟ್ಟಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಬಿಜೆಪಿ ಸರ್ಕಾರ ರಚನೆಗೆ ಎಂಟಿಬಿ ನಾಗರಾಜ್ ಕಾರಣ. ಕೆಟ್ಟ ಸರ್ಕಾರ ಹೋಗಲೆಂದು ರಾಜೀನಾಮೆ ಕೊಟ್ಟು ಹೊರ ಬಂದ್ರು. ಸರ್ಕಾರ ರಚನೆಗೆ ಕಾರಣರಾದವರ ಬೆನ್ನಿಗೆ ಚೂರಿ ಹಾಕಿದವರನ್ನ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.
ಮಗನಿಗೆ ಮತ ಹಾಕುವಂತೆ ಸಂಸದ ಬಚ್ಚೇಗೌಡ ಕೇಳಿದ್ದಾರೆ. ಇದು ಸಹ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ಕಣ್ಣಿಟ್ಟಿದೆ. ಬಚ್ಚೇಗೌಡರ ವಿರುದ್ದವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
Key words: hosakote-by-election-MP Bachegowda-indepenedent candidate- sharath bacchegowda-minster-R.Ashok