ಮೈಸೂರು,ನ,25,2019(www.justkannada.in): ರಾಜ್ಯದಲ್ಲಿ 15 ಕ್ಷೇತ್ರಗಳ ಉಪಚುನಾವಣೆ ಕಾವು ಜೋರಾಗಿದ್ದು ಈ ನಡುವೆ ಬೈ ಎಲೆಕ್ಷನ್ ನಲ್ಲಿ ತಟಸ್ಥವಾಗಿ ಉಳಿದಿರುವ ಜಿ.ಟಿ.ದೇವೇಗೌಡ ರಾಜಕೀಯ ಸಂಕಷ್ಟ ನಿವಾರಣೆಗಾಗಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದಾರೆ.
ತಮ್ಮ ಮನೆಯಲ್ಲಿ ಮುಂಜಾನೆಯೇ ಮಾಜಿ ಸಚಿವ ಜಿ.ಟಿ ದೇವೇಗೌಡರು ಪತ್ನಿ ಲಲಿತಾ ದೇವೇಗೌಡ, ಪುತ್ರ ಹರೀಶ್ ಗೌಡರ ಜತೆ ಸತ್ಯ ನಾರಾಯಣ ಪೂಜೆ ನೆರವೇರಿಸಿದರು. ಇನ್ನು ಹುಣಸೂರು ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತನ್ನ ಬೆಂಬಲ ಕೇಳುತ್ತಿದ್ದು, ಆದರೆ ಜಿಟಿ ದೇವೇಗೌಡರು ತಟಸ್ಥ ನಿಲುವು ಘೋಷಿಸಿ ಮೌನವಹಿಸಿದ್ದಾರೆ.
70ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡರು ಪೂಜೆ, ಪುನಸ್ಕಾರ ಹಮ್ಮಿಕೊಂಡಿದ್ದು ಇಂದು ದಿನವಿಡೀ ಟೆಂಪಲ್ ರನ್ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Key words: hunsur -by-election- Former minister- GT Deve Gowda – Satya Narayana puja