ಮೈಸೂರು,ನ,26,2019(www.justkannada.in): ಹೆಚ್.ವಿಶ್ವನಾಥ್ ನನ್ನನ್ನು ದುರ್ಯೋಧನ ಅಂತ ಕರೆದಿದ್ದಾರೆ. ನಾನು ದುರ್ಯೋಧನ ಅಂತ ಒಪ್ಪಿಕೊಳ್ಳುತ್ತೇನೆ. ಪುಣ್ಯಕ್ಕೆ ದುಶ್ಯಾಸನ ಅಂತ ಕರೆದಿಲ್ಲ. ದುರ್ಯೋಧನನಿಗೆ ಒಳ್ಳೆಯ ಗುಣಗಳಿವೆ. ಆದರೆ ಯಾರು ಭೀಮ, ಯಾರು ದುರ್ಯೋಧನ ಅಂತ ಜನ ತೀರ್ಮಾನ ಮಾಡ್ತಾರೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್, ಹುಣಸೂರು ಉಪಚುನಾವಣೆಯನ್ನ ತುಂಬಾ ಸಿರಿಯಸ್ ಆಗಿ ತೆಗೆದುಕೊಂಡಿದ್ದೇವೆ. ನಮಗೆ ಯಾರನ್ನೊ ಸೋಲಿಸೋದೆ ನಮ್ಮ ಗುರಿಯಲ್ಲ. ನಮ್ಮ ಮೊದಲ ತೀರ್ಮಾನ ನಮ್ಮ ಅಭ್ಯರ್ಥಿ ಗೆಲ್ಲಿಸುವುದು. ನಾವೆಲ್ಲರೂ ಸಾಕಷ್ಟು ಸಿರೀಯಸ್ ಆಗಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡ್ತ ಇದ್ದೇವೆ ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ಅನರ್ಹರನ್ನೆ ಪ್ರಮಾಣಿಕರು ಅಂದರೆ ಏನ್ ಹೇಳೋದು.?
ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಕಿಡಿಕಾರಿದ ಸಾ.ರಾ ಮಹೇಶ್, ರಾಜ್ಯದ ಮುಖ್ಯಮಂತ್ರಿಗಳು ಅನರ್ಹರನ್ನೆ ಪ್ರಮಾಣಿಕರು ಅಂದರೆ ಏನ್ ಹೇಳೋದು.? ಶಾಸಕ ಬದುಕಿದ್ದಾಗಲೇ ಉಪ ಚುನಾವಣೆ ನಡಿತಾ ಇರೋದು ಮೈಸೂರು ಜಿಲ್ಲೆ ಇತಿಹಾಸದಲ್ಲೆ ಇದೆ ಮೊದಲು. ಜನ ಎಲ್ಲವನ್ನ ಗಮನಿಸಿದ್ದಾರೆ,ಅವರೆ ಎಲ್ಲದಕ್ಕೂ ಉತ್ತರ ನೀಡ್ತಾರೆ. ಸರ್ಕಾರ ಬೀಳಿಸಲು ಮುಂಬೈಗೆ ಹೋಗಿ ಕುಳಿತಿದ್ರು. ಪ್ರವಾಹ ಬಂದಾಗ ರೆಸಾರ್ಟ್ ಸೇರ್ಕೊಂಡ್ರು. ಜನರ ಕಷ್ಟ ಇವರಿಗೆ ಬೇಕಿಲ್ಲ. ಈಗ ಮಂತ್ರಿ ಮಾಡೋದೇ ನಮ್ಮ ಗುರಿ ಅಂತೀರಿ. ಜನರ ಕಷ್ಟ ಕೇಳೋದು ನಿಮ್ಮ ಗುರಿ ಅಲ್ವ ? ಎಂದು ಸಿಎಂ ಬಿಎಸ್ ವೈಗೆ ಪ್ರಶ್ನೆ ಮಾಡಿದರು.
ನಾವಿಬ್ಬರು ಆಣೆ ಪ್ರಯಾಣಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೇ ತಪ್ಪು….
ಚಾಮುಂಡಿಬೆಟ್ಟದಲ್ಲಿ ಆಣೆ ಪ್ರಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ನಾವಿಬ್ಬರು ಆಣೆ ಪ್ರಯಾಣಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೇ ತಪ್ಪು. ಅಂದು ನಾನು ದೇವಸ್ಥಾನ ಒಳಗೆ ಕುಳಿತಿದ್ದೇ ನಿಜ. ಒಂದು ವೇಳೆ ನಾನು ಹೊರಗಡೆ ಬಂದಿದ್ರೆ. ನನ್ನ ಜೊತೆ ನೂರಾರು ಜನ ಕಾರ್ಯಕರ್ತರು ಇದ್ರು. ಒಂದು ಚೂರು ಹೆಚ್ಚು ಕಮ್ಮಿ ಆಗಿದ್ರೆ ಏನ್ ಮಾಡಬೇಕಿತ್ತು. ಜನ ಯಾರು ಪ್ರಮಾಣಿಕರು, ಅಪ್ರಮಾಣಿಕರು ಎಂಬುದನ್ನ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೆಚ್, ವಿಶ್ವನಾಥ್ ಗೆ ಟಾಂಗ್ ನೀಡಿದರು.
ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ ಸಾ.ರಾ ಮಹೇಶ್…
15 ಸ್ಥಾನ ಗೆಲ್ಲುತ್ತೇವೆ ಎಂಬ ಬಿಜೆಪಿ ನಾಯಕರ ಹೇಳುತ್ತಿದ್ದಾರೆ. ಇದನ್ನ ಗಮನಿಸಿದರೆ ಇವಿಎಂ ಮೇಲೆ ಕಣ್ಣು ಇಡಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ನಾಯಕರು ಹಿಂದೆ ಹಲವು ಹೇಳಿಕೆ ನೀಡಿದ್ದಾರೆ. ಆದರೆ ಈಗ ನನಗೂ ಸಣ್ಣದಾಗಿ ಅನುಮಾನ ಶುರುವಾಗಿದೆ. ಇವಿಎಂ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಇವಿಎಂ ಮೇಲೆ ಮಾಜಿ ಸಚಿವ .ಸಾ.ರಾ.ಮಹೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಟಿ ದೇವೇಗೌಡರು ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡ್ತಿದ್ದಾರೆ.
ಹುಣಸೂರು ಉಪ ಚುನಾವಣೆಯಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡ ತಟಸ್ಥರಾಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಜಿಟಿ ದೇವೇಗೌಡ ನಮ್ಮ ನಾಯಕರು. ಅವ್ರು ನಮ್ಮ ಜೊತೆಯಲ್ಲೇ ಇದ್ದಾರೆ. ಈಗಾಗಲೇ ಅವ್ರು ನಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ದೂರವಾಣಿ ಮೂಲಕ ಜೆಡಿಎಸ್ ಪಕ್ಷದ ಪರ ಕೆಲಸ ಮಾಡುವಂತೆ ಹೇಳಿದ್ದಾರೆ ಎಂದು ತಿಳಿಸಿದರು.
Key words: mysore- former minister- sa.ra Mahesh-hunsur- bjp- candidate-h.vishwanath