ಬೆಂಗಳೂರು,ಮೇ,18,2019(www.justkannada.in): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲ್ಲ. ಕಾಂಗ್ರೆಸ್ ಗೂ ಬಹುಮತ ಬರೋದು ಕಷ್ಟ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ, ಎರಡು ಪಕ್ಷಗಳಿಗೆ ಬಹುಮತ ಬರೋದು ಕಷ್ಟ. ಹೀಗಾಗಿ ಪ್ರಾದೇಶಿಕ ಪಕ್ಷಗಳ ಅಗತ್ಯ ಇರುತ್ತದೆ. ಬಿಜೆಪಿಯವರು 300 ಸೀಟು ಗೆಲ್ಲುತ್ತೇವೆ ಅಂತಾರೆ. 300 ಸೀಟು ಗೆಲ್ಲೊದು ಅಷ್ಟು ಸುಲಭವಲ್ಲ. ಫಲಿತಾಂಶ ಮೇ23ರ ಸಂಜೆ ವೇಳೆಬೆ ಬರೋದು ಕಷ್ಟ. ಮಧ್ಯರಾತ್ರಿವರೆಗೆ ರಿಸಲ್ಟ್ ಕಾಯಬೇಕಾಗುತ್ತದೆ ಎಂದರು.
ಹಾಗೆಯೇ ಮೈತ್ರಿ ಪಕ್ಷಗಳ ಗೊಂದಲಗಳಿಗೆ ಸರ್ಕಾರ ವಿಸರ್ಜನೆಯೇ ಪರಿಹಾರ ಎಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಸಮ್ಮಿಶ್ರ ಸರ್ಕಾರ ಮೊದಲಿನಿಂದಲೂ ಗೊಂದಲವಿದೆ. ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗಿಂದಲೂ ಗೊಂದಲವಿದೆ. ಯಾರ್ಯಾರು ಏನೇನು ಹೇಳಿಕೆ ಕೊಡುತ್ತಾರೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
Key words: BJP does not get majority in Lok Sabha polls – former Prime Minister HD Deve Gowda
#bangalore #politicalnews #hdkumaraswamy #basavarajahoratti