ಮೈಸೂರು,ನ,30,2019(www.justkannada.in): ಮೈಸೂರು ತಾಲ್ಲೂಕು ವರುಣಾ ಹೋಬಳಿ ಸರ್ಕಾರಿ ಉತ್ತನಹಳ್ಳಿ ಸರ್ವೆ ನಂ 13ರ ಕಟ್ಟೆ ಜಾಗ ಒತ್ತುವರಿಗೆ ಮತ್ತು ನಕಲಿ ದಾಖಲೆ ಸೃಷ್ಟಿಸಲು ಭೂಕಬಳಿಕೆದಾರರಿಗೆ ಅಧಿಕಾರಿಗಳು ಸಹಕರಿಸಿದ್ದು, ಹೀಗಾಗಿ ಈ ಪ್ರಕರಣವನ್ನ ಎಸ್ ಐಟಿ ತನಿಖೆಗೆ ವಹಿಸಬೇಕೆಂದು ಆರ್ ಟಿಐ ಕಾರ್ಯಕರ್ತ ರವೀಂದ್ರ ಎಂಬುವವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಗೆ ಪ್ರತಿಕ್ರಿಯಿಸಿ ಮಾಹಿತಿ ನೀಡಿದ ಆರ್ ಟಿಐ ಕಾರ್ಯಕರ್ತ ರವೀಂದ್ರ ಅವರು, ಉತ್ತನಹಳ್ಳಿಯ ಸರ್ವೆ ನಂ 13ರ ಸರ್ಕಾರಿ ಕಟ್ಟೆ ಜಾಗವನ್ನ ಶಿವಮಲ್ಲು ಎಂಬುವವರು ಒತ್ತವರಿ ಮಾಡಿಕೊಂಡು ಕಮರ್ಷಿಯಲ್ ಕಟ್ಟಡಗಳನ್ನ ನಿರ್ಮಿಸಿದ್ದಾರೆ. ಅಲ್ಲದೆ ಒತ್ತುವರಿ ಸರ್ಕಾರಿ ಕಟ್ಟೆ ಜಾಗವನ್ನ 1952-53ರಲ್ಲಿ ನಮಗೆ ಸಾಗುವಳಿಯಾಗಿ ನೀಡಲಾಗಿದೆ ಎಂದು ಒತ್ತುವರಿದಾರರು ನಕಲಿ ದಾಖಲೆಗಳನ್ನ ಸೃಷ್ಟಿಸಿ ನೀಡಿದ್ದರು. ಈ ದಾಖಲೆಗಳು ನಕಲಿ ಎಂದು ತಹಶೀಲ್ದಾರ್ ಅಂಗೀಕರಿಸಿದ್ದಾರೆ. ಒತ್ತುವರಿ ಮಾಡಿದ್ದ ಜಾಗವನ್ನ ತೆರವುಗೊಳಿಸುವಂತೆ ಸಹ ಆದೇಶಿಸಲಾಗಿತ್ತು.
ಆದರೆ ಕಟ್ಟೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ. ಸರ್ಕಾರ ಕಟ್ಟೆ ಜಾಗವನ್ನ ಸಾಗುವಳಿಯಾಗಿ ನೀಡಿದ್ದರೇ ಅದನ್ನ ಸಾಗುವಳಿಗೆ ಬಳಸಿಕೊಳ್ಳಬೇಕಿತ್ತು. ಆದರೆ ಕಮರ್ಷಿಯಲ್ ಕಟ್ಟಡಗಳನ್ನ ಕಟ್ಟಿದ್ದು ಏಕೆ ಎಂದು ರವೀಂದ್ರ ಅವರು ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಅಕ್ರಮಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಈಗಾಗಲೇ ತನಿಖೆ ಶುರುವಾಗಿದೆ. ಈ ಮಧ್ಯೆ ಸರ್ಕಾರಿ ಕಟ್ಟೆ ಜಾಗದ ಒತ್ತುವರಿ ಬಗ್ಗೆ ಕೆಲ ಮಾಹಿತಿಗಳನ್ನ ನೀಡದೆ ಸಂಬಂಧ ಪಟ್ಟ ಅಧಿಕಾರಿ ಸಹ ಗೌಪ್ಯತೆ ಕಾಪಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಇದನ್ನ ಗಮನಿಸಿದರೇ ಒತ್ತುವರಿದಾರರಿಗೆ ಅವರೇ ಪರೋಕ್ಷವಾಗಿ ಸಹಕಾರ ನೀಡುತ್ತಿರುವಂತಿದೆ ಎಂದು ಆರೋಪಿಸಿದರು. ಅದ್ದರಿಂದ ಭೂಕಬಳಿಕೆದಾರರ ಜತೆ ರೆವಿನ್ಯೂ ಅಧಿಕಾರಿಗಳೇ ಶಾಮೀಲಾಗಿದ್ದು, ಪ್ರಕರಣವನ್ನ SIT ಗೆ ವಹಿಸಬೇಕು. ಜತೆಗೆ ಪ್ರಕರಣವನ್ನ Karnataka Land Grabbing Prohibition Special Courtಗೆ ವರ್ಗಾಯಿಸಬೇಕೆಂದು ಆಗ್ರಹಿಸುತ್ತೇನೆ ಎಂದು ರವೀಂದ್ರ ಅವರು ತಿಳಿಸಿದ್ದಾರೆ.
Key words: Mysore -government –land- create –fake-documents-case -SIT.