ಮೈಸೂರು,ಡಿ,2,2019(www.justkannada.in): ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸುವಂತೆ ಎಸ್ ಡಿಪಿಐ ರಾಜ್ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆಗ್ರಹಿಸಿದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅಬ್ದುಲ್ ಮಜೀದ್, ಈ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ನಾನು ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಮತ್ತು ಬಿಜೆಪಿ ಒತ್ತಡಕ್ಕೆ ಪೊಲೀಸ್ ಮಣಿದ್ದಿದ್ದಾರೆ. ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗಿ ಅಮಾಯಕರನ್ನ ಬಂಧಿಸಿದ್ದಾರೆ. ಎಸ್ ಡಿಪಿಐ ಸಂಘಟನೆಯನ್ನು ದುರ್ಬಳಕೆ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಇವರ ತನಿಖೆಯಲ್ಲಿ ಉರುಳಿಲ್ಲ. ಹೀಗಾಗಿ ಈ ಪ್ರಕರಣದ ವಿರುದ್ದ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಪೊಲೀಸರು ಬಂಧಿಸಿರುವ ಆರೋಪಿ ಪರ್ಹಾನ್ ಅನ್ನು ನಿನ್ನೆ ಎಸ್ ಡಿಪಿಐ ಕಚೇರಿ ಮುಂದೆ ನಿಲ್ಲಿಸಿ ಪೋಟೋ ತೆಗೆದಿದ್ದಾರೆ. ಇದು ಯಾವ ಕಾನೂನು ಎಂಬುದು ನಮಗೆ ತಿಳಿಯುತ್ತಿಲ್ಲ. ಪೊಲೀಸ್ ಇಲಾಖೆ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿ ನಡೆಯುತ್ತಿದೆ ಎಂದು ಅಬ್ದುಲ್ ಮಜೀದ್ ಆಗ್ರಹಿಸಿದರು.
ನಮಗೆ ಒಂದಲ್ಲಾ ಒಂದು ಕಾರಣಕ್ಕೂ ತೊಂದರೆ ಕೊಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ಪ್ರತಿಭಟನೆ ಮಾಡುತ್ತೇವೆ. ಅಪರಾಧಿಗಳಿಗೆ ಶಿಕ್ಷೆಯಾಗಲಿ. ಆದರೆ ನಿರಪರಾಧಿಗಳಿಗೆ ತೊಂದರೆ ಆಗಲು ನಾನು ಬಿಡುವುದಿಲ್ಲ. ನಾವು ಇವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಇವರ ಜೊತೆಯೇ ಇರುತ್ತೇನೆ ಎಂದು ಅಬ್ದುಲ್ ಮಜೀದ್ ತಿಳಿಸಿದರು.
ನಮಗೆ ಪ್ರತಿದಿನ ಪೊಲೀಸರು ಟಾರ್ಚರ್ ಕೊಡ್ತಿದ್ದಾರೆ- ಆರೋಪಿ ಮುಹಿಬ್ ಪತ್ನಿ ಹೀನಾ ಕೌಸಬ್ ಆರೋಪ…
ಇದೇ ವೇಳೆ ಮಾತನಾಡಿರುವ ಆರೋಪಿ ಮುಹಿಬ್ ಪತ್ನಿ ಹೀನಾ ಕೌಸಬ್, ನಮಗೆ ಪೋಲಿಸರು ಪ್ರತಿ ದಿನ ಒಂದಲ್ಲಾ ಒಂದು ಕಾರಣಕ್ಕೆ ಟಾರ್ಚರ್ ಕೋಡ್ತಿದ್ದಾರೆ. ನಾವು ಬದುಕಲು ಆಗ್ತಾ ಇಲ್ಲ. ಮನೆಗೆ ಬಂದು ಒಂದಲ್ಲ ಒಂದು ಕಾರಣಕ್ಕೆ ತೊಂದರೆ ಕೋಡ್ತ ಇದ್ದಾರೆ. ನಾವು ನೆಮ್ಮದಿಯಿಂದ ಜೀವನ ಮಾಡಲು ಆಗ್ತಾ ಇಲ್ಲ. ಇದೇ ರೀತಿ ಮುಂದುವರೆ ನಾವು ಕಮಿಷನರ್ ಬಳಿ ಹೋಗುತ್ತೇವೆ. ಅಲ್ಲೂ ನ್ಯಾಯ ಸೀಗದಿದ್ದರೆ ಅಲ್ಲೇ ಕುಟುಂಬವೆಲ್ಲಾ ಸಾಯುತ್ತೇವೆ ಎಂದು ಆರೋಪಿ ಮುಹಿಬ್ ಪತ್ನಿ ಹೀನಾ ಕೌಸಬ್ ಎಚ್ಚರಿಕೆ ನೀಡಿದರು.
Key words:Lawyer Tanveer sait- attempted- murder case- sdpi-Abdul Majeed – judicial probe