ಕಲ್ಬುರ್ಗಿ,ಮೇ,19,2019(www.justkannada.in): ಇಂದು ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದುಯ ಮತದಾನ ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಚಿಂಚೋಳಿಯಲ್ಲಿ 7.88 ಶೇ. ಹಾಗೂ ಕುಂದಗೋಳದಲ್ಲಿ 9.59 ಶೇ. ಮತದಾನವಾಗಿದೆ. ಚಿಂಚೋಳಿ ತಾಲೂಕಿನ ರುಸ್ತಂಪುರ ಗ್ರಾಮದ ಒಂದು ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಮತದಾನ ವಿಳಂಬವಾಗಿ ಆರಂಭಗೊಂಡಿತ್ತು. ಉಳಿದಂತೆ ಮತದಾನ ಶಾಂತವಾಗಿ ನಡೆಯುತ್ತಿದೆ. ಚಿಂಚೋಳಿ ಕೈ ಅಭ್ಯರ್ಥಿ ಸುಭಾಷ್ ರಾಥೋಡ್ ಚಿಂಚೋಳಿ ಕ್ಷೇತ್ರದ ಸೇರಿ ಬಡಾತಾಂಡದ ಮತಗಟ್ಟೆ ಸಂಖ್ಯೆ 165ರಲ್ಲಿ ಮತದಾನ ಮಾಡಿದ್ದಾರೆ.
ಇನ್ನು ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದೆ 8 ರಾಜ್ಯಗಳ 59 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದೆ.
Key words: Voting for the Chincholi and Kundagola Assembly by election
#Chincholi #Kundagola #Assembly #election