ಅನುಮಾನಸ್ಪದ ಸ್ಪೋಟದಲ್ಲಿ ವ್ಯಕ್ತಿ ಸಾವು ಕೇಸ್: ಎಫ್ ಎಸ್ ಎಲ್ ತಂಡ ಪರಿಶೀಲನೆ ನಂತರ  ನಿಜವಾದ ಸಂಗತಿ ತಿಳಿಯಲಿದೆ- ಕಮೀಷನರ್ ಟಿ ಸುನೀಲ್ ಕುಮಾರ್ ಹೇಳಿಕೆ

ಬೆಂಗಳೂರು,ಮೇ,19,2019(www.justkannada.in):  ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಸಂಭವಿಸಿದ ಅನುಮಾನಸ್ಪದ ಸ್ಪೋಟದಲ್ಲಿ ವ್ಯಕ್ತಿ ಸಾವು  ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮೀಷನರ್ ಟಿ ಸುನೀಲ್ ಕುಮಾರ್, ಎಫ್ ಎಸ್ ಎಲ್ ತಂಡ ಪರಿಶೀಲನೆ ನಂತರ  ನಿಜವಾದ ಸಂಗತಿ ತಿಳಿಯಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಪ್ರಕರಣ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್,  9-15 ಕ್ಕೆ ಬ್ಲಾಸ್ಟ್ ವೈಯಾಲಿಕಾವಲ್ ನ ರಸ್ತೆಯಲ್ಲಿ ಬ್ಲಾಸ್ಟ್ ಆಗಿದೆ  ವೆಂಕಟೇಶ್ ನಡೆದುಕೊಂಡು ಹೋಗ್ತಿದ್ದ ವೇಳೆ ಬ್ಲಾಸ್ಟ್ ಆಗಿದೆ. ಮುನಿರತ್ನ ಅವರ ಒಳಗೂ ಆಗಿಲ್ಲ, ಹೊರಗೂ ಆಗಿಲ್ಲ. ರಸ್ತೆಯಲ್ಲಿ ಬ್ಲ್ಯಾಸ್ಟ್ ಆಗಿರೋದು. ಭೂಮಿಯೊಳಗಿಂದ ಕ್ರೇಟ್ ಮಾದರಿಯ ವಸ್ತು ಬ್ಲ್ಯಾಸ್ಟ್ ಆಗಿರೋದು ಮೇಲ್ನೋಟಕ್ಕೆ ಕಂಡುಬರ್ತಿದೆ. ಎಫ್ ಎಸ್ ಎಲ್ ತಂಡ ಪರಿಶೀಲನೆ ನಡೆಸಿದ ನಂತ್ರ ನಿಜವಾದ ಸಂಗತಿ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದರು.

ವೆಂಕಟೇಶ್ ದೋಬಿ ಕೆಲಸ ಮಾಡ್ಕೊಂಡಿದ್ರು. ಅವರ ಮನೆಯ ಅಳಿದುಳಿದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ರು . ಈ ವೇಳೆ ಬ್ಲ್ಯಾಸ್ಟ್ ಆಗಿರೋದು ಅಂತಾ ಗೊತ್ತಾಗಿದೆ. ಎನ್ ಐ ಎ ಸೇರಿದಂತೆ ಎಲ್ಲಾ ತನಿಖಾ ತಂಡಗಳಿಗೂ ವಿಚಾರ ಮುಟ್ಟಿಸಲಾಗುವುದು ಎಂದು ತಿಳಿಸಿದರು.
key words:  person’s death in a suspicious explosion.-police Commissioner T Sunil Kumar react

#crimenews #Bangalore #policeCommissioner T Sunil Kumar