ಉಪಚುನಾವಣೆ ಮತದಾನ ಮುಕ್ತಾಯ: ಸಂಜೆ ವೇಳೆಗೆ ಶೇ. 60ರಷ್ಟು ವೋಟಿಂಗ್: ಕ್ಷೇತ್ರವಾರು ಮತದಾನ ಪ್ರಮಾಣ ಪಟ್ಟಿ ಹೀಗಿದೆ…

ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ನಡೆದಿದ್ದು, ಮತದಾನ ಮುಕ್ತಾಯವಾಗಿದೆ. ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಸಂಜೆ 5 ಗಂಟೆ ವೇಳೆಗೆ 15 ಕ್ಷೇತ್ರಗಳ ಒಟ್ಟಾರೆ ಶೇ. 60ರಷ್ಟು ಮತದಾನವಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇ. 79.80 ರಷ್ಟು ಮತದಾನವಾಗಿದ್ದು ಇಲ್ಲಿ ಅತಿ ಹೆಚ್ಚು ಮತದಾನ ನಡೆದಿದೆ. ಇನ್ನು ಬೆಂಗಳೂರಿನ ಕೆ.ಆರ್ ಪುರಂ ನಲ್ಲಿ ಅತಿ ಕಡಿಮೆ ಮತದಾನವಾಗಿದ್ದು. 37.50ರಷ್ಟು ವೋಟಿಂಗ್ ನಡೆದಿದೆ. ಮಧ್ಯಾಹ್ನದ ನಂತರ ಮತದಾನ ಬಿರುಸುಗೊಂಡಿದ್ದು ಹೆಚ್ಚು ಜನರು ಮತಗಟ್ಟೆಯತ್ತ ಧಾವಿಸಿ ಮತದಾನ ಮಾಡಿದ್ದಾರೆ.

 

ಸಂಜೆ 5 ಗಂಟೆ ವೇಳೆಗೆ ಕ್ಷೇತ್ರವಾರು ಮತದಾನ ಪ್ರಮಾಣದ ಪಟ್ಟಿ ಇಲ್ಲಿದೆ ನೋಡಿ….

 ಕೆ.ಆರ್. ಪೇಟೆ- ಶೇ.75.87

ಹುಣಸೂರು ಕ್ಷೇತ್ರ-ಶೇ. 74.44

ಹೊಸಕೋಟೆ ಕ್ಷೇತ್ರ-ಶೇ.76.19

ಮಹಾಲಕ್ಷ್ಮೀ ಲೇಔಟ್-ಶೇ.40.09

ರಾಣೆಬೆನ್ನೂರು-ಶೇ. 67.92

ಯಲ್ಲಾಪುರ-ಶೇ. 72.23

ಗೋಕಾಕ್- ಶೇ. 66.64

ಯಶವಂತಪುರ-ಶೇ.48.34

ವಿಜಯನಗರ -ಶೇ. 58.93

ಹಿರೇಕೆರೂರು-ಶೇ. 72.42

ಕಾಗವಾಡ -ಶೇ.69.70

ಚಿಕ್ಕಬಳ್ಳಾಪುರ -ಶೇ. 79.80

ಅಥಣಿ- ಶೇ.70.73

ಶಿವಾಜಿನಗರ -ಶೇ.41.92

ಕೆ.ಆರ್ ಪುರಂ-ಶೇ. 37.50

 

Key words: By-election – 15 assembly constituencies-voting-percentage