ಮೈಸೂರು,ಡಿ,6,2019(www.justkannada.in): ಪೇಪರ್ ಟೋಪಿ ತೊಟ್ಟು ಮಿಂಚಿಂಗ್. ಶಾಲಾ ಮಕ್ಕಳೊಡನೆ ಸೇರಿ ಕಾಲ ಕಳೆದ ಮಾಜಿ ಸಚಿವ ಜಿಟಿ ದೇವೇಗೌಡರು. ಇದು ಕಂಡು ಬಂದಿದ್ದು ಮೈಸೂರು ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ.
ಹೌದು ಕಡಕೋಳ ಗ್ರಾಮದ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನ ಇಂದು ಆಯೋಜಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಹಬ್ಬಕಾರ್ಯಕ್ರಮಕ್ಕೆ ಮಾಜಿ ಸಚಿವ ಜಿಟಿ ದೇವೇಗೌಡರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿ.ಟಿ ದೇವೇಗೌಡರು, ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ಕಷ್ಟ ಅಂತಾರೆ ಆದ್ರೆ ಈ ಕಲಿಕಾ ಹಬ್ಬದಲ್ಲಿ ವೈಜ್ಞಾನಿಕ ಕಿಟ್ ಬಳಸಿ ವಿವಿದ ವಸ್ತು ತಯಾರಿಸುತ್ತಾರೆ. ಇದರಿಂದ ಮಕ್ಕಳ ಬೆಳವಣಿಗೆ ಸಹಕಾರಿ ಆಗಲಿದೆ ಎಂದು ಹೇಳಿದರು.
ಹಾಗೆಯೇ ಮಾಜಿ ಸಚಿವ ಜಿ.ಟಿ ದೇವೇಗೌಡರು ಪೇಪರ್ ಟೋಪಿ ತೊಟ್ಟು ಶಾಲೆಯಲ್ಲಿದ್ದ ಮಕ್ಕಳ ಜತೆ ಕಾಲಕಳೆದರು. ವಿಜ್ಞಾನ ಹಬ್ಬ ಕಾರ್ಯಕ್ರಮದಲ್ಲಿ ಕಚ್ಚಾ ವಸ್ತುಗಳಿಂದ ಕಾರಂಜಿ, ಪೇಪರ್ ನಿಂದ ಟೋಪಿ, ಕಲರ್ ಕನ್ನಡಕ ವಿವಿಧ ಬಗೆಯ ಹೂವುಗಳನ್ನು ತಯಾರಿಸಿದ್ದು ವಿಶೇಷ ಮೆರುಗು ನೀಡಿತ್ತು.
Key words: mysore- Former minister -GT Deve Gowda – spent time – school children- Science Festival