ಮೈಸೂರು,ಮೇ,19,2019(www.justkannada.in): ಮೈತ್ರಿ ಪಕ್ಷಗಳ ಗೊಂದಲಕ್ಕೆ ಸರ್ಕಾರ ವಿಸರ್ಜನೆಯೇ ಪರಿಹಾರ ಎಂದು ಜೆಡಿಎಸ್ ಮುಖಂಡ ಬಸವರಾಜಹೊರಟ್ಟಿ ನೀಡಿದ್ದ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.
ಬಸವರಾಜಹೊರಟ್ಟಿ ಹೇಳಿಕೆ ಸರಿಯಲ್ಲ. ನಾನು ಹೊರಟ್ಟಿ ಆತ್ಮೀಯ ಗೆಳೆಯರು. ಇಬ್ಬರು ಒಟ್ಟಿಗೆ ವಿಧಾನಸಭೆಗೆ ಬಂದ್ವಿ. ಅವರು ಪರಿಷತ್ತು ನಾನು ವಿಧಾನಸಭೆ ನಾಯಕರಾಗಿದ್ವಿ. ಆದ್ರೆ ಈ ಸಂದರ್ಭದಲ್ಲಿ ಅವರ ಮಾತು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್, ಕೇವಲ ಒಂದು ವರ್ಷಕ್ಕೆ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆ ಮಾಡೋದು ಸರಿಯಲ್ಲ. ಅಲ್ಲದೆ ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರುತ್ತೆ. ಸಿದ್ದರಾಮಯ್ಯನವರು ಇವತ್ತು ಡೆಲ್ಲಿಗೆ ಹೋಗಿ ಸಮಸ್ಯೆ ಸರಿಮಾಡಿಕೊಂಡು ಬರ್ತಾರೆ. ಅಷ್ಟಕ್ಕೆ ಸರ್ಕಾರ ವಿಸರ್ಜನೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ ಯಾರು ಊಹಿಸಲು ಸಾಧ್ಯವಿಲ್ಲ. ಈ ಬಾರಿ ಜನರೇ ಸ್ವಯಂಪ್ರೇರಿತವಾಗಿ ಮತದಾನ ಮಾಡಿದ್ದಾರೆ. ಅದು ಹಾಲಿ ಸರ್ಕಾರದ ವಿರುದ್ದ ಇರೋ ಆಕ್ರೋಶ. ಅದನ್ನ ಯಾವ ರೀತಿ ಜನ ಮತಹಾಕಿದ್ದಾರೆ ಅಂತ ಊಹೆ ಮಾಡೋಕೆ ಆಗೋಲ್ಲ. ಅದಕ್ಕಾಗಿ ಈ ಬಾರಿಯ ಫಲಿತಾಂಶ ಊಹೆ ಮಾಡೋಕೆ ಆಗೋಲ್ಲ ಎಂದರು.
ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಕಾಯ್ದೆ ತರೋ ಸಿಎಂ ಹೇಳಿಕೆ ಸಹಮತ..
ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಕಾಯ್ದೆ ತರುವ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಹಮತ ಇದೆ. ಆದ್ರೆ ಮಾಧ್ಯಮಗಳ ಕೆಲವು ಕಾರ್ಯಕ್ರಮ ನಿಯಂತ್ರಣ ಬೇಕಾಗಿದೆ. ರಾಜಕಾರಣಿಗಳನ್ನ ಬಫೂನ್ ರೀತಿ ತೋರಿಸುತ್ತಾರೆ. ನಗೆ ಪಾಟಲಿಗೆ ಈಡು ಮಾಡಿ ಮುಜುಗರ ತರುತ್ತಾರೆ. ಇದು ಅಷ್ಟು ಸಮಂಜಸವಲ್ಲ. ರಾಜಕಾರಣಿಗಳಿಗೆ ಅವಮಾನವಾಗುವಂತ ಕಾರ್ಯಕ್ರಮ ಬೇಡ. ಕೈ ಮುಗಿದು ಮನವಿ ಮಾಡ್ತಿನಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
Key words: jds president h.vishwanath Opposition to JDS leader Basavaraj’s statement
#mysore #politicalnews #hvishwanath