ಬಳ್ಳಾರಿ,ಡಿ,17,2019(www.justkannada.in): ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿರುವ ಆರೋಗ್ಯ ಸಚಿವ ಶ್ರೀರಾಮುಲುಗೆ ಇದೀಗ ಭೂ ಸಂಕಷ್ಟ ಎದುರಾಗಿದೆ. 2008 ರಲ್ಲಿ ಸುಮಾರು 57 ಎಕರೆ ಸರ್ಕಾರಿ ಜಮೀನನ್ನ ಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಭೂ ಕಬಳಿಕ ತಡೆ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
2008ರಲ್ಲಿ ಸಚಿವ ಶ್ರೀರಾಮುಲು ಬಳ್ಳಾರಿಯ ಕೌಲ್ ಬಜಾರ್ ವ್ಯಾಪ್ತಿಯ 57 ಎಕರೆ ಜಮೀನನ್ನು ಅಕ್ರಮವಾಗಿ ಭೂ ಕಬಳಿಕೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ನಿವೇಶನ ಕಳೆದುಕೊಂಡಿದ್ದ ಕೃಷ್ಣಮೂರ್ತಿ ಎಂಬುವವರು ಈ ಬಗ್ಗೆ ದೂರು ನೀಡಿದ್ದರು.
ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಭೂ ಕಬಳಿಕ ತಡೆ ವಿಶೇಷ ನ್ಯಾಯಾಲಯದ ನ್ಯಾ. ಹೆಚ್.ಎನ್ ನಾರಾಯಣ ನೇತೃತ್ವದ ಪೀಠ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಬಳ್ಳಾರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಹೀಗಾಗಿ ಇದೀಗ ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದ ಸಚಿವ ಬಿ ಶ್ರೀರಾಮುಲುಗೆ 57 ಎಕರೆ ಅಕ್ರಮ ಭೂ ಕಬಳಿಕೆ ಆರೋಪದ ಮೂಲಕ ಸಂಕಷ್ಟ ಎದುರಾದಂತಾಗಿದೆ.
Key words: minister-sriramulu- Government Land –case- Land Use Prevention Court