ಹಾಸನ,ಡಿ,25,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ನಡೆಯುತ್ತಿರುವ ಹೋರಾಟ ಒಂದು ಪಿತೂರಿಯಾಗಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಆರೋಪಿಸಿದರು.
ಹಾಸನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮಾಧುಸ್ವಾಮಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಹೋರಾಟ ಪಿತೂರಿ ನಡೆಯುತ್ತಿದೆ. ಕೆಲವರು ವೋಟ್ ಬ್ಯಾಂಕ್ ಗಾಗಿ ಈ ರೀತಿ ಕೆಲಸ ಮಾಡುತ್ತಿದ್ದಾರೆ, ಎನ್ ಆರ್ ಸಿ ಮೊದಲು ಶುರುಮಾಡಿದ್ದೇ ಕಾಂಗ್ರೆಸ್ಸಿಗರು. ಎನ್ ಆರ್ ಸಿಗೂ ಸಿಎಎಗೂ ಸಂಬಂಧವಿಲ್ಲ. ಎನ್ ಆರ್ ಸಿ ಜಾರಿಯಾದರೆ ಕೆಲವರಿಗೆ ತೊಂದರೆಯಾಗುತ್ತೆ ಎಂದು ಜನರನ್ನ ಎತ್ತಿಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ದೇಶದಲ್ಲಿ ಹುಟ್ಟಿದ ಯಾರನ್ನೂ ಹೊರ ಹಾಕುವುದಿಲ್ಲ. ಸಿಎಎ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಭಾರತದ ನಾಗರಿಕರಿಗೆ ತೊಂದರೆಯಾಗಲ್ಲ. ಮಂಗಳೂರಿನಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತವಾದದ್ದು.ಇದು ಪೊಲೀಸರು ರಿಲೀಸ್ ಮಾಡಿದ ವಿಡಿಯೋದಿಂದ ತಿಳಿತಯುತ್ತೆ. ಭಾರತದಲ್ಲಿ ಯಾರು ಬೇಕಾದ್ರೂ ಬಂದು ವಾಸಿಸುವುದಾದ್ರೆ ಈ ದೇಶ ಉಳಿಯುತ್ತಾ…? ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು.
Key words: against – Citizenship Amendment Act – conspiracy-Law Minister-Madhuswamy