ನವದೆಹಲಿ, ಜನವರಿ 03, 2019 (www.justkannada.in): ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಮುಂಬರುವ 2020ರ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ವೆಸ್ಟ್ ಇಂಡೀಸ್ ಲೆಜೆಂಡ್ ಆಟಗಾರ ಬ್ರಿಯಾನ್ ಲಾರಾ ಭವಿಷ್ಯ ನುಡಿದಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಟೆಸ್ಟ್ ಹಾಗೂ ಏಕದಿನ ಮಾದರಿಗೆ ಹೋಲಿಸಿದರೆ ಟಿ-20 ಶ್ರೇಯಾಂಕದಲ್ಲಿ ಹಿಂದೆ ಬಿದ್ದಿದೆ.
ಆದಾಗ್ಯೂ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್ ಗೆಲ್ಲುವ ಸಾಮಾರ್ಥ್ಯ ಹೊಂದಿದೆ ಎಂದು ವೆಸ್ಟ್ ಇಂಡೀಸ್ ದಂತಕತೆ ಹಾಗೂ ಮಾಜಿ ನಾಯಕ ಬ್ರಿಯಾನ್ ಲಾರಾ ಹೇಳಿದ್ದಾರೆ.