ಬೆಂಗಳೂರು, ಜನವರಿ 06, 01, 2020 (www.justkannada.in): ಆಸಿಡ್ ದಾಳಿಗೊಳಗಾದ ಯುವತಿಯ ಕುರಿತು ನೈಜ ಘಟನೆಯಾಧಾರಿತ ಸಿನಿಮಾ ಮಾಡಿರುವ ನಟಿ ದೀಪಿಕಾ ಪಡುಕೋಣೆ ಮತ್ತು ಆ ಸಿನಿಮಾ ನಿರ್ದೇಶಕ ಮೇಘನಾ ಗುಲ್ಜಾರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಈ ಸಿನಿಮಾದ ಸ್ಕ್ರಿಪ್ಟ್ ನನ್ನದು ಎಂದು ನಿರ್ಮಾಪಕ ರಾಕೇಶ್ ಭಾರ್ತಿ ಎಂಬವರು ನ್ಯಾಯಾಲಯಕ್ಕೆ ಕೃತಿ ಚೌರ್ಯ ಮಾಡಿದ ಆರೋಪದಲ್ಲಿ ದೂರು ಸಲ್ಲಿಸಿದ್ದಾರೆ. ಇದು ಕ್ರಿಮಿನಲ್ ಕೇಸ್ ಆಗಿದ್ದು ಇದು ಸಾಬೀತಾದರೆ ಗಂಭೀರ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈ ಮೂಲಕ ಬಿಡುಗಡೆಗೂ ಮುನ್ನ ಛಪಕ್ ಸಿನಿಮಾ ತಂಡ ಸಂಕಷ್ಟಕ್ಕೀಡಾಗಿದೆ. ಈ ಸಿನಿಮಾದ ಟ್ರೈಲರ್ ಗಳು ಈಗಾಗಲೇ ಹಿಟ್ ಆಗಿದ್ದು, ಆಸಿಡ್ ದಾಳಿಗೊಳಗಾದ ಯುವತಿಯ ಪಾತ್ರದಲ್ಲಿರುವ ದೀಪಿಕಾ ನಟನೆಯ ಬಗ್ಗೆ ಭಾರೀ ಹೊಗಳಿಕೆ ವ್ಯಕ್ತವಾಗಿದೆ.