ಮೈಸೂರು,ಜ,6,2020(www.justkannada.in): ಜನವರಿ 18ಕ್ಕೆ ಮೈಸೂರು ಮೇಯರ್ ಎಲೆಕ್ಷನ್ ನಡೆಯಲಿದ್ದು, ಜೆಡಿಎಸ್ ನಲ್ಲಿರುವ ನಾಲ್ವರು ಆಕಾಂಕ್ಷಿಗಳಿಂದಲೂ ಮೇಯರ್ ಸ್ಥಾನಕ್ಕಾಗಿ ಬಿಗ್ ಫೈಟ್ ಏರ್ಪಟ್ಟಿದೆ.
ಜೆಡಿಎಸ್ ನಿರ್ಮಲಾ ಹರೀಶ್, ರೇಷ್ಮಾಭಾನು, ಮತ್ತು ತಸ್ಲೀಮ್ ಹಾಗೂ ನಮ್ರತಾ ರಮೇಶ್ ನಡುವೆ ಮೇಯರ್ ಪೈಪೋಟಿ ಉಂಟಾಗಿದೆ ಎನ್ನಲಾಗಿದೆ. ಮೇಯರ್ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಮೇಯರ್ ಸ್ಥಾನದ ಆಕಾಂಕ್ಷಿ ನಮ್ರತಾ ರಮೇಶ್ ದೇವರ ಮೊರೆ ಹೋಗಿದ್ದಾರೆ.
ಒಂಟಿಕೊಪ್ಪಲಿನಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ಪಡುವರಹಳ್ಳಿಯ ಕಾರ್ಪೋರೇಟರ್ ನಮ್ರತಾ ರಮೇಶ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮೇಯರ್ ಪಟ್ಟಕ್ಕಾಗಿ ನಮ್ರತಾ ರಮೇಶ್ ಟೆಂಪಲ್ ರನ್ ಶುರು ಮಾಡಿದ್ದು, ಹೇಗಾದ್ರೂ ಮಾಡಿ ಮೇಯರ್ ಪಟ್ಟಕ್ಕೇರಲು ಸರ್ಕಸ್ ನಡೆಸುತ್ತಿದ್ದಾರೆ.
ಹೀಗಾಗಲೇ ಸಾರಾ ಮಹೇಶ್ ಬಣದಲ್ಲಿ ಗುರುತಿಸಿಕೊಂಡಿರುವ ನಮ್ರತಾ ರಮೇಶ್, ಜೆಡಿಎಸ್ ನಾಯಕರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ನಲ್ಲಿರುವ ನಾಲ್ವರು ಆಕಾಂಕ್ಷಿಗಳ ನಡುವೆ ಪೈಪೋಟಿ ಜೋರಾಗಿದ್ದು, ನಿರ್ಮಲಾ ಹರೀಶ್, ರೇಷ್ಮಾಭಾನು, ಮತ್ತು ತಸ್ಲೀಮ್ ಅವರಿಗೆ ನಮ್ರತಾ ರಮೇಶ್ ಬಿಗ್ ಫೈಟ್ ನೀಡುತ್ತಿದ್ದಾರೆ.
Key words: Mysore-. Mayor-election- Big Fight -between –JDS-four -aspirant