ಮೆಲ್ಬರ್ನ್, ಜನವರಿ 09, 2019 (www.justkannada.in): ಕಾಡ್ಗಿಚ್ಚಿನಲ್ಲಿ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಉದ್ದೇಶದಿಂದ ನಡೆಸುತ್ತಿರುವ ಪ್ರದರ್ಶನ ಟೆನಿಸ್ ಪಂದ್ಯಗಳಲ್ಲಿ ದಿಗ್ಗಜ ಆಟಗಾರರು ಆಟದ ಮೂಲಕ ನೆರವಾಗಲಿದ್ದಾರೆ.
ರೋಜರ್ ಫೆಡರರ್, ರಫೆಲ್ ನಡಾಲ್, ಸೆರೆನಾ ವಿಲಿಯಮ್ಸ್ ಸೇರಿದಂತೆ ಹಲವರು ಪಂದ್ಯಗಳನ್ನು ಆಡಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಎರಡು ಕೋಟಿಗೂ ಅಧಿಕ ಎಕರೆಯಷ್ಟು ಪ್ರದೇಶಕ್ಕೆ ಹಾನಿ ಮಾಡಿದೆ.
26 ಜನರು ಸಾವನ್ನಪ್ಪಿದ್ದಲ್ಲದೆ ಲಕ್ಷಾಂತರ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಜನವರಿ 15ರಂದು ಎಒ ರ‍್ಯಾಲಿ ಎಂದು ಕರೆಯಲಾಗುವ ಎರಡೂವರೆ ಗಂಟೆಗಳ ಪಂದ್ಯಗಳು ನಡೆಯಲಿದ್ದು ಇಲ್ಲಿ ಸಂಗ್ರಹವಾದ ಮೊತ್ತವನ್ನು ಪರಿಹಾರ ನಿಧಿಗೆ ನೀಡಲಾಗುತ್ತದೆ. ಪ್ರತಿ ಟಿಕೆಟ್‌ಗೆ 2600 (37.09 ಡಾಲರ್) ದರ ನಿಗದಿಪಡಿಸಲಾಗಿದೆ.