ಮೈಸೂರು,ಜ,9,2020(www.justkannada.in): ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮಿರ್ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಆಯೋಜಕರಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಆರ್. ಶಿವಪ್ಪ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ನಿನ್ನೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಎಂಬ ಫಲಕ ಪ್ರದರ್ಶನ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಮೈಸೂರು ವಿವಿಯಿಂದ ಪ್ರತಿಭಟನಾ ಆಯೋಜಕರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ. ಪ್ರತಿಭಟನೆ ನಡೆಸಿದ ದಲಿತ ವಿದ್ಯಾರ್ಥಿ ಒಕ್ಕೂಟ, ಮೈಸೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಸಂಬಂಧ ಮೈಸೂರು ವಿವಿ ಪ್ರತ್ಯೇಕ ದೂರು ದಾಖಲಿಸಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ವಿವಿ ಕುಲಸಚಿವ ಆರ್.ಶಿವಪ್ಪ, ಪ್ರತಿಭಟನೆಗೆ ನಮ್ಮ ಅನುಮತಿ ಪಡೆದಿಲ್ಲ. ಅಲ್ಲಿ ಫ್ರಿ ಕಾಶ್ಮೀರ ಭಿತ್ತಿಪತ್ರ ತೋರಿಸಿದ್ದು ನಮ್ಮ ವಿದ್ಯಾರ್ಥಿನಿ ಅಲ್ಲ. ನಾವೂ ಪೊಲೀಸರಿಗೆ ಪ್ರತ್ಯೇಕ ದೂರು ನೀಡುತ್ತಿದ್ದೇವೆ. ದೇಶದ ಐಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿರುವವರ ಮೇಲೆ ಶಿಸ್ತು ಕ್ರಮ ಜರುಗಿಸುತ್ತೇವೆ. ದೇಶದಲ್ಲಿ ಮೈಸೂರು ವಿವಿಗೆ ವಿಶೇಷ ಸ್ಥಾನ ಇದೆ ಎಂದು ತಿಳಿಸಿದ್ದಾರೆ.
Key words: Free Kashmir -Playcard – Mysore university-Notice-issued – Registrar- R. Shivappa – protest organizer