ಮೈಸೂರು,ಮೇ,22,2019(www.justkannada.in): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ರಾಜಕೀಯ ಗುರು ಡಿ.ದೇವರಾಜ ಅರಸು ಅವರ ಬಗ್ಗೆ ಹಿರಿಯ ಹೋರಾಟಗಾರ ಪ.ಮಲ್ಲೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಲಂಚ ಆರಂಭಿಸಿದವರು ಡಿ.ದೇವರಾಜ ಅರಸು. ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಯೊಬ್ಬ ಅಧಿಕಾರಿಗೂ 5000 ರೂ. ಲಂಚ ಹೋಗುತ್ತಿತ್ತು ಎಂದು ಪ.ಮಲ್ಲೇಶ್ ಹೇಳಿದ್ದಾರೆ
ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಪ.ಮಲ್ಲೇಶ್, ಡಿ.ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಪ್ರತಿಯೊಬ್ಬ ಅಧಿಕಾರಿಗೂ 5000 ರೂ. ಲಂಚ ಹೋಗುತ್ತಿತ್ತು. ಸಿದ್ದರಾಮಯ್ಯ ಇದನ್ನು ಒಪ್ಪಿಕೊಳ್ಳೋದಿಲ್ಲ. ಅದು ನನಗೆ ಚನ್ನಾಗಿ ಗೊತ್ತು. ರಾಜ್ಯದಲ್ಲಿ ಮುತ್ಸದ್ಧಿ ಎನ್ನಿಸಿಕೊಂಡವರು ನಿಜಲಿಂಗಪ್ಪ ಮಾತ್ರ. ಡಿ.ದೇವರಾಜ ಅರಸು ಕೂಡ ಮುತ್ಸದ್ದಿ ಅಲ್ಲ ಎಂದರು.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಜಾರಿಗೆ ತರುವ ವಿಚಾರಕ್ಕೆ ಹಾಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಗರಂ ಆದ ಪ.ಮಲ್ಲೇಶ್ , ಕನ್ನಡ ಶಾಲೆಗಳಲ್ಲಿ ಅವೈಜ್ಞಾನಿಕವಾಗಿ ಇಂಗ್ಲಿಷ್ ತರುಲು ಹೊರಟಿರೋದು ಅವಿವೇಕಿತನ. ಅವಿವೇಕಿಗಳು ಜ್ಞಾನ ಇಲ್ಲದೆ ಇರೋರು ಐ.ಎ.ಎಸ್ ಅಧಿಕಾರಿಗಳ ಮಾತು ಕೇಳಿ ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ವೇದಿಕೆಯಲ್ಲೇ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಚಕಾರವೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ.ಮಲ್ಲೇಶ್ ಮಾತಿಗೆ ನಾನೇ ಮೊದಲು ರಿಯಾಕ್ಟ್ ಮಾಡಿದ್ದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು
ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಮಲ್ಲೇಶ್, ನನಗೆ ಗೊತ್ತಿದೆ ಯಾರು ರಿಯಾಕ್ಟ್ ಮಾಡಿದ್ದಾರೆ . ಅಲ್ದೆ ರೈತರ ಪರ ಹೋರಾಟಗಾರ ಮೇಲಿನ ಕೇಸ್ ಗಳು ವಾಪಾಸ್ ತೆಗೆದು ಕೊಂಡಿದ್ದಾರೆ. ಆದ್ರೆ ಕನ್ನಡ ಪರ ಹೋರಾಟಗಾರ ಮೇಲಿನ ಕೇಸ್ ಗಳು ವಾಪಾಸ್ ತೆಗೆದುಕೊಂಡಿಲ್ಲ. ಈಗಾದ್ರೆ ಕನ್ನಡ, ಕನ್ನಡ ಹೋರಾಟಗಾರರ ಸ್ಥಿತಿ ಮುಂದೆ ಏನಾಗುತ್ತೆ ನೀವೇ ಹೇಳಿ ಎಂದು ಪ್ರಶ್ನಿಸಿದರು.
Key words: Kannada fighter P. Mallesh give controversial statement about D. Devaraja arasu
#mysore #Kannadafighter # PMallesh #DDevaraja arasu