ನಾನು ಮತ್ತು ಬಿಎಸ್ ವೈ ಒಂದಲ್ಲ ಒಂದು ದಿನ ಸೇರೆ ಸೇರ್ತೀವಿ- ಅಚ್ಚರಿ ಹೇಳಿಕೆ ನೀಡಿದ ‘ಕೈ’ ನಾಯಕ ಸಿಎಂ ಇಬ್ರಾಹಿಂ

ಚಿಕ್ಕಮಗಳೂರು ,ಜ,16,2020(www.justkannada.in): ನಾನು ಮತ್ತು ಸಿಎಂ ಬಿಎಸ್ ಯಡಿಯೂರಪ್ಪ ಒಂದಲ್ಲ ಒಂದು ದಿನ ಸೇರೇ ಸೇರುತ್ತೇವೆ ಎಂದು ಅಚ್ಚರಿಕೆ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಬಿಜೆಪಿ  ಬಗ್ಗೆ ತಮ್ಮ ಒಲವು ತೋರಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ನಾನು ಯಡಿಯೂರಪ್ಪ ಒಂದಲ್ಲ ಒಂದು ದಿನ ಸೇರೆ ಸೇರ್ತೀವಿ. ನಾನು ಅವರು ಒಂದೇ ರೈಲಿನಲ್ಲಿ ಪ್ರಯಾಣಿಸೋದು ಆದ್ರೆ ನಿಲ್ದಾಣ ಬೇರೆ, ಯಾವಾಗ ಸೇರುತ್ತೇವೊ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪರನ್ನ ಹಾಡಿ ಹೊಗಳಿ ಮಾಜಿ ಸಿಎಂ ಸಿದ್ಧರಾಮಯ್ಯರನ್ನ ತೆಗಳಿದ್ದಾರೆ. ಯಡಿಯೂರಪ್ಪ ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಲೇ ಸಿದ್ದರಾಮಯ್ಯರನ್ನ ತೆಗಳಿದ ಇಬ್ರಾಹಿಂ, ಲಿಂಗಾಯತ ಪ್ರತ್ಯೇಕ ಧರ್ಮ ಸಿದ್ದರಾಮಯ್ಯಗೆ ಬೇಡ ಎಂದೆ ಈ ಜಗಳದಲ್ಲಿ ಬೀಳಬೇಡ ಎಂದರೂ ನನ್ನ ಮಾತು ಕೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: chikkamagalore-MLC-CM Ibrahim-one day-cm bs yeddyurappa