ಮೈಸೂರು,ಮೇ,22,2019(www.justkannada.in): ಬಾರ್ ಅಂಡ್ ರೆಸ್ಟೋರೆಂಟ್ ತೆರಯಲು ಅನುಮತಿ ನೀಡಬಾರದೆಂದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮಸ್ಥರು ನಗರದ ಅಬಕಾರಿ ಡೆಪ್ಯೂಟಿ ಕಮಿಷನರ್ ಗೆ ಮನವಿ ಸಲ್ಲಿಸಿದರು.
ರಾಜ್ ಕುಮಾರ್ ರಸ್ತೆಯಲ್ಲಿ ಬಾರ್ ಅಂಡ ರೆಸ್ಟೋರೆಂಟ್ ತೆರೆಯಲಿ ಗ್ರಾಮಪಂಚಾಯತಿ ಎನ್ ಒ ಸಿ ನೀಡಿದೆ. ಈ ಹಿಂದೆ ಇದೇ ರಸ್ತೆಯಲ್ಲಿ ಎಂ ಎಸ್ ಐ ಎಲ್ ಮಳಿಗೆ ತೆರೆಯಲು ಅಬಕಾರಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ಧರು. ಬಳಿಕ ವೈನ್ ಶಾಪ್ ತೆರೆಯಲು ಯೋಗ್ಯವಾದ ಸ್ಥಳವಲ್ಲ ಎಂದು ವರದಿ ನೀಡಿದ್ದರು.
ಈಗ ಅದೇ ರಸ್ತೆಯಲ್ಲಿ ಖಾಸಗಿ ಬಾರ್ ಅಂಡ್ ರೆಸ್ಟೊರೆಂಟ್ ಗೆ ಎನ್ ಒ ಸಿ ನೀಡಿರುವ ಗ್ರಾಮಪಂಚಾಯತಿ ನಡೆ ಸರಿಯಲ್ಲ. ಅಕ್ಕಪಕ್ಕದಲ್ಲಿ ದೇವಸ್ಥಾನ, ಶಾಲೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಾರ್ ತೆರೆಯಲು ಅನುಮತಿ ನೀಡಬಾರದು. ಅನುಮತಿ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
Key words: Do not give permission to open the bar- Villagers requested to officer.
#mysore #bar #villager #request