ಬೆಂಗಳೂರು, ಜನವರಿ 20, 2019 (www.justkannada.in): ಡಾಲಿ ಸಿನಿಮಾ ಚಿತ್ರೀಕರಣ ಲಕ್ನೋದಲ್ಲಿ ಶುರುವಾಗಿದ್ದು ಭರ್ಜರಿಯಾಗಿ ಶೂಟಿಂಗ್ ಸಾಗಿದೆ.
ಪ್ರಭು ಶ್ರೀನಿವಾಸ್ ಚಿತ್ರ ನಿರ್ದೇಶಿಸುತ್ತಿದ್ದು, ಲಕ್ನೋದಲ್ಲಿ ಸುಮಾರು 23 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಟಗರು ಚಿತ್ರದಲ್ಲಿ ಡಾಲಿ ಹೆಸರಿನ ನೆಗೆಟಿವ್ ಕ್ಯಾರೆಕ್ಟರ್‌ನಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಧನಂಜಯ್ ಆ ಪಾತ್ರದ ಹೆಸರನ್ನೇ ಚಿತ್ರದ ಟೈಟಲ್‌ಗಿಟ್ಟಿರೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಚಿತ್ರದಲ್ಲಿ ಧನಂಜಯ್ ಲುಕ್ ರಿವೀಲ್ ಆಗಿದ್ದು, ರಗಡ್ ಲುಕ್‌ನಲ್ಲಿ ವಯಲೆಂಟ್ ಆಗಿ ಡಾಲಿ ಹೆಸರಿಗೆ ತಕ್ಕಂತೆ ಕಾಣಿಸಿಕೊಂಡಿದ್ದಾರೆ. ಕೋಲ್ಕತ್ತಾ, ಆಗ್ರಾ, ಲಖನೌ ಮತ್ತಿತರ ನಗರಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.