ಬೆಂಗಳೂರು, ಜನವರಿ 20, 2019 (www.justkannada.in): ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್, ನ್ಯೂಜಿಲೆಂಡ್ ಸರಣಿ ಆಡೋದು ಅನುಮಾನವಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಬೆಂಗಳೂರು ಏಕದಿನ ಪಂದ್ಯದ ವೇಳೆ ಧವನ್, ಎಡ ಭುಜಕ್ಕೆ ಗಾಯ ಮಾಡಿಕೊಂಡ ಪರಿಣಾಮ ಕಿವೀಸ್ ಸರಣಿಗೆ ಅಲಭ್ಯರಾಗೋ ಸಾಧ್ಯತೆ ಹೆಚ್ಚಿದೆ.
ಆಸಿಸ್ ಇನ್ನಿಂಗ್ಸ್ನ 5ನೇ ಓವರ್ನಲ್ಲಿ ಕವರ್ಸ್ನಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಧವನ್, ಌರೋನ್ ಫಿಂಚ್ ಬಾರಿಸಿದ ಚೆಂಡನ್ನ ತಡೆಯಲು ಹೋಗಿ ಎಡ ಭುಜಕ್ಕೆ ಗಾಯಮಾಡಿಕೊಂಡಿದ್ದರು.
ನಂತರ ಫೀಲ್ಡ್ನಿಂದ ಹೊರ ಹೋದ ಧವನ್, ಬ್ಯಾಟಿಂಗೂ ಆಗಮಿಸಲಿಲ್ಲ. ಧವನ್ ಬದಲಿಗೆ ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು.