ಬೆಂಗಳೂರು,ಜ,21,2020(www.justkannada.in): ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತರ್ ಜಾಲದಲ್ಲಿ ಕಾಲ್ ಗರ್ಲ್ಸ್ ಬ್ಯುಸಿನೆಸ್ ಮಾಡುತ್ತಿದ್ದಾರೆಂದು ಆರೋಪಿಸಿ ಡಿಜಿ&ಐಜಿಪಿಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ ದೂರು ನೀಡಿದ್ದಾರೆ.
ಈ ಬಗ್ಗೆ ಡಿಜಿ ಮತ್ತು ಐಜಿಪಿಗೆ ದೂರು ನೀಡಿರುವ ಮಾಜಿ ಸಚಿವ ರಾಮಲಿಂಗರೆಡ್ಡಿ, ತಮ್ಮ ವ್ಯಾಪ್ತಿಯಲ್ಲಿ ಕಾಲ್ ಗರ್ಲ್ಸ್ ಬ್ಯುಸಿನೆಸ್ ಮಾಡ್ತಿದ್ದಾರೆ. ಕೋರಮಂಗಲ ಕಾಲ್ ಗರ್ಲ್ಸ್ ಎಂಬ ಶೀರ್ಷಿಕೆಯಡಿ ಅಂತರ್ಜಾಲದ ಮೂಲಕ ಈ ಕುರಿತು ಆ್ಯಡ್ ಕೂಡ ಕೊಡುತ್ತಿದ್ದಾರೆ. ಅಲ್ಲದೆ ಕೋರಮಂಗಲದ ಕೆಲ ಮಸಾಜ್ ಪಾರ್ಲರ್ ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆ ಸಾರ್ವಜನಿಕರು ನನಗೆ ಮಾಹಿತಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಚಟುವಟಿಕೆಯನ್ನ ತಡೆಯಬೇಕು. ಇದರ ಬಗ್ಗೆ ತನಿಖೆ ನಡೆಸುವಂತೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.
Key words: Call Girls -Business – Internet-Former Minister –Ramalingareddy- complained – DG & IGP