ಬೆಂಗಳೂರು, ಜನವರಿ 23, 2019 (www.justkannada.in): ಬರೋಬ್ಬರಿ ಎರಡು ವರ್ಷಗಳ ನಂತರ ಸಿನಿಮಾಗಾಗಿ ಪವರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ.
ಹೌದು. ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ಮರಳಿದ್ದಾರೆ. 2018ರಲ್ಲಿ ತೆರೆಕಂಡಿದ್ದ ‘ಅಜ್ಞಾವಾಸಿ ಪವನ್ ಅಭಿನಯದ ಕೊನೆಯ ಚಿತ್ರವಾಗಿತ್ತು.
ಪವನ್ ಕಲ್ಯಾಣ್ ಅಭಿನಯದ ಈ ಹೊಸ ಸಿನಿಮಾ ಹಿಂದಿಯಲ್ಲಿ ತೆರೆಕಂಡು ಬ್ಲಾಕ್ಬಸ್ಟರ್ ಹಿಟ್ ಆದ ‘ಪಿಂಕ್’ ರಿಮೇಕ್. ‘ಪಿಂಕ್’ನಲ್ಲಿ ಅಮಿತಾಭ್ ಅಭಿನಯಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಪವನ್ ನಿರ್ವಹಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಕಳೆದ ಸೋಮವಾರದಿಂದ ಆರಂಭವಾಗಿದೆ.