ಮೈಸೂರು, ಜ.26, 2020 : (www.justkannada.in news ) ಸಾಲ ತಂದಾದ್ರು ನಾವು ರೈತರ ನೆರವಿಗೆ ನಿಲ್ಲುತ್ತೇವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಟ್ಟು ರೈತರು ನೆಮ್ಮದಿಯಾಗಿ ಬದುಕುವ ರೀತಿ ಮಾಡ್ತಿನಿ. ರೈತರು ಕಣ್ಣೀರು ಹಾಕದಂತೆ ಮಾಡುತ್ತೇನೆ. ರೈತರ ನೆಮ್ಮದಿಯಾಗಿ ಬದುಕುವ ರೀತಿ ಮಾಡೇ ತೀರುತ್ತೇನೆ.
ಇದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುತ್ತೂರು ಕ್ಷೇತ್ರದಲ್ಲಿ ನೀಡಿದ ವಾಗ್ಧಾನ. ಸುತ್ತೂರು ಜಾತ್ರ ಮಹೋತ್ಸವದಲ್ಲಿಭಾಗವಹಿಸಲು ಆಗಮಿಸಿದ್ದ ಯಡಿಯೂರಪ್ಪ ಮಾತನಾಡಿದ್ದು ಹೀಗೆ…
ಮಾರ್ಚ್ 5 ಮಂಡಿಸುವ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಅನುಧಾನ ಕೊರತೆ ಆದ್ರೂ ಸರಿಯೆ. ಆದ್ರೆ ಕೃಷಿ ಕ್ಷೇತ್ರಕ್ಕೆ ಹಣಕಾಸಿನ ತೊಂದರೆ ಆಗದಂತೆ ಬಜೆಟ್ ಮಂಡನೆ ಮಾಡುತ್ತೇವೆ. ವಿಶೇಷ ಯೋಜನಗಳನ್ನ ಕೃಷಿ ಕ್ಷೇತ್ರಕ್ಕೆ ನೀಡುತ್ತೇನೆ.
ರಾಜ್ಯದ ಬೊಕ್ಕಸ ಖಾಲಿ ಎಂಬ ಆರೋಪ ವಿಚಾರ. ಸಿದ್ದರಾಮಯ್ಯ ಗೆ ಸಿಎಂ ಯಡಿಯೂರಪ್ಪ ತಿರುಗೇಟು. ಸಿದ್ದರಾಮಯ್ಯ ಎಲಾ ಪ್ರಶ್ನೆಗಳಿಗೆ ಈಗ ಉತ್ತರ ಕೊಡೊಲ್ಲ. ಮಾರ್ಚ್ ೫ ರಂದು ಬಜೆಟ್ ಮಂಡಿಸುತ್ತೇನೆ. ಆಗ ಸಿದ್ದರಾಮಯ್ಯ ಪಶ್ನೆ ಮಾಡಲಿ. ನಾನು ಸದನದಲ್ಲೆ ಉತ್ತರ ಕೊಡುತ್ತೇನೆ. ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಯಡಿಯೂರಪ್ಪ ಹೇಳಿಕೆ.
ಸುಧಾಕರ್ ಸಚಿವರಾಗೋದನ್ನ ಕನ್ಪಮ್ ಮಾಡಿದ ಸಿಎಂ ಯಡಿಯೂರಪ್ಪ. ಬಾಷಣದ ಆರಂಭದಲ್ಲಿ ಮುಂದಿನ ಸಚಿವರಾಗುವ ಸುಧಾಕರ್ ಎಂದು ಭಾಷಣ ಆರಂಭಿಸಿದ ಸಿಎಂ. ಸಚಿವ ಸಂಪುಟದಲ್ಲಿ ಸುಧಾಕರ್ ಗೆ ಸಚಿವ ಸ್ಥಾನ ಖಾತ್ರಿ ಪಡಿಸಿದ ಯಡಿಯೂರಪ್ಪ. ಮುಂದಿನ ಸಚಿವ ಸುಧಾಕರ್ ಎನ್ನುತ್ತಿದ್ದಂತೆ ನಗು ಬೀರಿದ ಶಾಸಕ ಡಾ.ಸುಧಾಕರ್
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕರಿಗೆ 2 ಕೋಟಿ ರೂ ನೀಡಿದೆ.ಕಾನೂನಾತ್ಮಕವಾಗಿ ತೆರಿಗೆ ಹಿಡಿದು ಅವ್ರ ಖಾತೆಗೆ ಹಣ ಜವ ಆಗಿದೆ. ಬೆಂಗಳೂರಿನಲ್ಲಿ 50 ಲಕ್ಷ ರೂ ನ ವಸತಿ ನೀಡಲಾಗಿದೆ ಎಂದ ಸಿಎಂ ಯಡಿಯೂರಪ್ಪ. ಸುತ್ತೂರಿನ ಸಿಎಂ ಯಡಿಯೂರಪ್ಪ ಹೇಳಿಕೆ.
ದಾವೋಸ್ ಪ್ರವಾಸದಿಂದ ಕೈಗಾರಿಕಾಭಿವೃದ್ಧಿಗೆ ಸಹಕಾರಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ. ಎಸ್.ಎಂ.ಕೃಷ್ಣ ಅವರು ದಾವೋಸ್ ಪ್ರವಾಸ ಮಾಡಿದ್ದರು. ಅನಂತರ ಯಾರೂ ಹೋಗಿರಲಿಲ್ಲ. 16 ವರ್ಷಗಳ ನಂತರ ದಾವೋಸ್ಗೆ ಹೋಗಿ ಬಂದಿದ್ದೇನೆ. ಸುಮಾರು 40 ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಬೆಂಗಳೂರು, ಮೈಸೂರು ಹೊರತುಪಡಿಸಿ ರಾಜ್ಯದ ಇತರೆಡೆ ಕೈಗಾರಿಕೆಗಳು ಬರಬೇಕು. ಯುವಕರಿಗೆ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಬೇಕು.
ರಾಜ್ಯದಲ್ಲಿ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆಗೆ ಪ್ರಮುಖ ಒಪ್ಪಂದ ಆಗಿದೆ. ಭವಿಷ್ಯದಲ್ಲಿ ಅವರ ಜತೆ ನಿಕಟ ಸಂಪರ್ಕ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿಸುತ್ತೇವೆ. ಇದು ಅತ್ಯಂತ ಫಲಪ್ರದಾಯ ವಿದೇಶ ಪ್ರವಾಸ. ಮೈಸೂರಿನ ಸುತ್ತೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ.
ಯಡಿಯೂರಪ್ಪ ಮುಖ್ಯ ಮಂತ್ರಿ ಆದಾಗ ಬಹು ದೊಡ್ಡ ಮಳೆ ಆಯ್ತು. ಯಡಿಯೂರಪ್ಪ ಅಧಿಕಾರ ಹಿಡಿದ ರಾಜ್ಯದಲ್ಲಿ ಸಂವೃದ್ಧಿಯ ಮಳೆ ಆಗುತ್ತೆ. ರೈತರು ಸಂತೋಷದಿಂದ ಇರುವಂತ ಕಾಲ ಸೃಷ್ಟಿ ಆಗುತ್ತೆ. ರೈತರಿ ಸುಲಭವಾಗಿ ಮತ್ತು ಉಚಿತವಾಗಿ ಪಹಣಿ ಸಿಗುವಂತ ವ್ಯವಸ್ಥೆಯನ್ನ ಸಿಎಂ ಯಡಿಯೂರಪ್ಪ ಮಾಡಬೇಕು ಎಂದು ವೇದಿಕೆಯಲ್ಲಿ ಮನವಿ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ.
ಯಡಿಯೂರಪ್ಪ ಮೇಲೆ ಎಲ್ಲಾ ನಾಯಕರಿಗೆ ನಂಬಿಕೆ ಇದೆ. ಕೊಟ್ಟ ಮಾತಿನಂತೆ ಯಾರಾದ್ರು ನಡೆದುಕೊಂಡಿದ್ದಾರೆ. ಮೈಸೂರು ಸಾಂಸ್ಕೃತಿಕ ರಾಜಧಾನಿ. ಯಡಿಯೂರಪ್ಪ ಸರ್ಕಾರ ನಿಂತ ನೀರಲ್ಲ ಹರಿಯುವ ನೀರು.
ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವ್ರೆ ಸಿಎಂ ಆಗಿರಬೇಕು. ಸುತ್ತೂರಿನ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ವಸತಿ ಸಚಿವ ವಿ ಸೋಮಣ್ಣ ಹೇಳಿಕೆ.
ಜಾತ್ರೆಯಲ್ಲೂ ಪ್ರಚಾರ.
ಸುತ್ತೂರು ಜಾತ್ರೆಯಲ್ಲಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ಮಾಡಿದ ಸಚಿವ ವಿ.ಸೋಮಣ್ಣ. ಅದೃಷ್ಟ ಯಾರಪ್ಪನ ಮನೆಯ ಸ್ವತ್ತು ಅಲ್ಲ. ವಿಜಯೇಂದ್ರ ಮುಂದೆ ಏನಾಗುತ್ತಾರೆ ಅಂತ ಯಾರಿಗೂ ಗೊತ್ತಿಲ್ಲ. ಈ ಕ್ಷೇತ್ರದ ಆಶೀರ್ವಾದ ಬೇಕು. ಸುತ್ತೂರು ಸ್ವಾಮೀಜಿ ಅವರಂತಹ ಆಶೀರ್ವಾದ ಬೇಕು. ಸುತ್ತೂರು ಜಾತ್ರೆ ಸಮಾರೋಪ ಸಮಾರಂಭದಲ್ಲಿ ಸೋಮಣ್ಣ ಭಾಷಣ.
ವರುಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯೇಂದ್ರ. ಅಂತಿಮ ಕ್ಷಣದಲ್ಲಿ ವಿಜಯೇಂದ್ರ ಕೈ ತಪ್ಪಿದ್ದ ಬಿಜೆಪಿ ಟಿಕೆಟ್.
Key words : mysore-suttur-cm-yadiyurappa-formers-loan-help-assure