ಕೊರೋನ್ ವೈರಸ್‍ ಮುಂಜಾಗ್ರತೆ : ಚೀನಾದಿಂದ ಮೈಸೂರಿಗೆ ಹಿಂದಿರುಗದಂತೆ 18 ಚೀನಾ ವಿದ್ಯಾರ್ಥಿಗಳಿಗೆ ಸೂಚನೆ.

 

ಮೈಸೂರು, ಜ.30, 2020 : (www.justkannada.in news ) : ರಜೆಯ ಮೇಲೆ ಚೀನಾಗೆ ತೆರಳಿರುವ ವಿದ್ಯಾರ್ಥಿಗಳನ್ನು ಸದ್ಯಕ್ಕೆ ಭಾರತಕ್ಕೆ ವಾಪಾಸ್ ಆಗದಂತೆ ಮೈಸೂರು ವಿಶ್ವವಿದ್ಯಾನಿಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನ್ ವೈರಸ್‍ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮೈಸೂರು ವಿವಿ ಈ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯದ ಇತರೆ ವಿವಿಗೆ ಹೋಲಿಸಿದಲ್ಲಿ ಪ್ರತಿಷ್ಠಿತ ಮೈಸೂರು ವಿವಿಯಲ್ಲಿ ಚೀನಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಿನ್ನೆಲೆಯಲ್ಲಿ ವಿವಿ ಮುಂಜಾಗ್ರತ ಕ್ರಮ ಜರುಗಿಸಿದೆ. ಈ ತನಕ ಕೊರೋನಾ ವೈರಸ್ ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 170ಕ್ಕೆ ಏರಿದೆ. ಜತೆಗೆ ಈವರೆಗೆ 7,700 ಮಂದಿಗೆ ಸೋಂಕು ತಗುಲಿರುವುದು ಖಚಿತಗೊಂಡಿದೆ. ಈ ನಡುವೆ ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನ್ ವೈರಸ್‍ ಇದೀಗ ಭಾರತದಲ್ಲೂ ಕಾಣಿಸಿಕೊಂಡಿದ್ದು, ಕೇರಳದಲ್ಲಿ ಒರ್ವ ವಿದ್ಯಾರ್ಥಿಯಲ್ಲಿ ಈ ವೈರಸ್ ಪತ್ತೆಯಾಗಿರುವುದು ಆತಂಕಕ್ಕೆ ಎಡೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಅವರನ್ನು ‘ ಜಸ್ಟ್ ಕನ್ನಡ ಡಾಟ್ ಇನ್ ‘ ಮಾತನಾಡಿಸಿದಾಗ ಅವರು ಹೇಳಿದಿಷ್ಟು…

mysore-university-chinees-students-informed-not-to-come-back-mysore-vc-hemanthkumar

ಮೈಸೂರು ವಿವಿಯಲ್ಲಿ ಚೀನಾ ದೇಶದ ಒಟ್ಟು 120 ವಿದ್ಯಾರ್ಥಿಗಳು ಈ ಸಾಲಿನಲ್ಲಿ ದಾಖಲಾಗಿದ್ದು ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲಾ ಕಂಪ್ಯೂಟರ್ ಸೈನ್ಸ್ ವಿಭಾಗದ ಬಿ.ಟೆಕ್ ಹಾಗೂ ಎಂ.ಎಸ್. ಪ್ರೋಗ್ರಾಮಿಂಗ್ ನ ಇನ್ಫಾರ್ಮೇಷನ್ ಟೆಕ್ನಾಲಜಿ ಹಾಗೂ ಸಾಫ್ಟ್ ವೇರ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಾಯನ ನಡೆಸುತ್ತಿದ್ದಾರೆ. 120 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಚೀನಾಗೆ ತೆರಳಿದ್ದು, ಅವರನ್ನು ಸದ್ಯಕ್ಕೆ ಅಲ್ಲಿಂದ ಹಿಂದಿರುಗದಂತೆ ಸೂಚಿಸಲಾಗಿದೆ.
ಹೊಸ ವರ್ಷಾಚರಣೆಗೆ ತೆರಳಿದವರು :
ಚೀನಾದಲ್ಲಿ ಹೊಸ ವರ್ಷದ ಆಚರಣೆ ಬಹು ದೊಡ್ಡದು. ಈ ಹಿನ್ನೆಲೆಯಲ್ಲಿ ಮೈಸೂರು ವಿವಿಯಲ್ಲಿ ಅಧ್ಯಾಯನ ನಡೆಸುತ್ತಿದ್ದ ವಿದ್ಯಾರ್ಥಿಗಳ ಪೈಕಿ 18 ಮಂದಿ, ಜ. 15 ರಂದು ಚೀನಾಗೆ ತೆರಳಿದರು. ಜ.25 ರಂದು ಚೀನಾದಲ್ಲಿ ಹೊಸ ವರ್ಷಾಚರಣೆ. ಇದನ್ನು ಮುಗಿಸಿಕೊಂಡು ಅವರು ಈಗಾಗಲೇ ವಾಪಸ್ ಆಗಬೇಕಿತ್ತು. ಆದರೆ ಅಷ್ಟರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕರೋನಾ ವೈರಸ್ ಕಾರಣದಿಂದ ಅವರನ್ನು ಸದ್ಯಕ್ಕೆ ಹಿಂದಿರುಗದಂತೆ ಸೂಚಿಸಲಾಗಿದೆ. ಅವರಲ್ಲಾ ಚೀನಾದ ಝೂಮೇಡಿಯನ್ ( zhumadian) ಪ್ರಾವೆನ್ಸಿಸ್ ನ ಹೊಂಗೈ ( Huanghai) ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು.

KEY WORDS : mysore-university-chinees-students-informed-not-to-come-back-mysore-vc-hemanthkumar

ENGLISH SUMMARY :

mysore-university-chinees-students-informed-not-to-come-back-mysore-vc-hemanthkumar

Coronavirus Warning: 18 Chinese students on New Year’s Eve warned not to return to Mysore
more number of Chinese students are studying in the prestigious Mysore university compared to the rest of the state university’s. A total number of 120 chinees students are enrolled and studying in Mysore university.
They are studying B.Tech and MS programming in Computer Science. that to Information Technology and Software Engineering. out Of the 120 students, 18 have traveled to China and have been instructed not to return from there. The New Year celebration in China is huge. so, jan. 15th these students went to China. on Jan. 25 New Year’s Eve in China.