ನವದೆಹಲಿ,ಫೆ,6,2020(www.justkannada.in): ನಿಮಗೆ ಮಹಾತ್ಮ ಗಾಂಧಿ ಟ್ರೇಲರ್ ಆಗಿರಬಹುದು, ಆದರೆ ನಮಗೆ ಅವರೇ ಜೀವನ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಟಾಂಗ್ ನೀಡಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಪೌರತ್ವ ತಿದ್ದುಪಡಿ ಕಾಯ್ದೆ, ರಾಮಜನ್ಮಭೂಮಿ, ಜಮ್ಮಕಾಶ್ಮೀರ ವಿಚಾರವನ್ನ ಪ್ರಸ್ತಾಪಿಸಿ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು. ರಾಷ್ಟ್ರಪತಿಗಳ ಭಾಷಣ ದೇಶಕ್ಕೆ ದಾರಿ ತೋರಿಸುವಂತಹದ್ದು. ಕೋಟ್ಯಾಂತರ ಜನರಲ್ಲಿ ವಿಶ್ವಾಸ ಮೂಡಿಸುವಂತಹದ್ದಾಗಿದೆ. ನಮ್ಮದು ವೇಗವಾಗಿ ಮುನ್ನಡೆಯುವ ಸರ್ಕಾರವಾಗಿದೆ. ಕೇಂದ್ರ ಸರ್ಕಾರ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಢುತ್ತಿದ್ದೇವೆ. ಕಿಸಾಸ್ ಕ್ರೆಡಿಟ್ ಖಾರ್ಡ್ ನಿಂದ ರೈತರಿಗೆ ಅನುಕೂಲವಾಗಿದೆ. ಮನೆ ಮನೆಗಳಲ್ಲಿ ಉಚಿತ ಅಡುಗೆ ಅನಿಲ ಸೌಲಭ್ಯ ನೀಡಿದ್ದೇವೆ ದೇಶದಲ್ಲಿ ವಿದೇಶಿ ಕಂಪನಿಗಳ ಹೂಡಿಕೆ ಹೆಚ್ಚಾಗುತ್ತಿದೆ. ಭಾರತ ಬಂಡವಾಳ ಸ್ನೇಹಿ ದೇಶವಾಗುತ್ತಿದೆ.ಆದರೆ ವಿಪಕ್ಷಗಳು ಸರ್ಕಾರದ ಕೆಲಸಗಳನ್ನ ವಿರೋಧಿಸುತ್ತಿವೆ. ಕಾಂಗ್ರೆಸ್ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ನಿಮ್ಮಂತೆ ನಾವು ಕಾರ್ಯಭಾರ ಮಾಡಿದ್ದರೆ ಸ್ವಾತಂತ್ರ್ಯ ಬಂದ 70 ವರ್ಷ ನಂತರ ಸಂವಿಧಾನದ ಆರ್ಟಿಕಲ್ 370 ರದ್ದು ಮಾಡಲು ಸಾಧ್ಯವಾಗುತ್ತಿರಲಿಲ್ಲ. ರಾಮಜನ್ಮ ಭೂಮಿ ವಿವಾದ ಬಗೆಹರಿಯಲು ಸಾಧ್ಯವೇ ಇರಲಿಲ್ಲ. ರಾಮಜನ್ಮಭೂಮಿ ವಿವಾದ ವಿವಾದವಾಗಿಯೇ ಉಳಿಯುತ್ತಿತ್ತು. ತ್ರಿವಳಿ ತಲಾಖ್ ನಿಂದ ಮುಕ್ತಿ ಸಿಗುತ್ತಿರಲಿಲ್ಲ. ನಮ್ಮ ಈ ಹಿಂದಿನ ಆಡಳಿತ ನೋಡಿದ ಜನತೆ ನಮಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಜಮ್ಮುಕಾಶ್ಮೀರ ಭಾರತದ ಕಿರೀಟ. ಕಾಂಗ್ರೆಸ್ ಗೆ ಮುಸ್ಲೀಮರು ಕೇವಲ ಮುಸ್ಲೀಮರು. ಆದರೆ ನಮಗೆ ಅವರು ಭಾರತೀಯರು. ದೇಶವಿಭಜಿಸುವ ಹೇಳಿಕೆ ನೀಡುವವರ ಜತೆ ನಿಂತು ನಮ್ಮ ಮೇಲೆಯೇ ದೇಶವಿಭಜನೆ ಆರೋಪ ಮಾಡಿದರು ಎಂದು ಕುಟುಕಿದ ಪ್ರಧಾನಿ ಮೋದಿ, ಸಿಎಎ ಜಾರಿಯಿಂದ ನಾಗರಿಕರಿಗೆ ತೊಂದರೆಯಾಗಲ್ಲ. ಅಲ್ಪಸಂಖ್ಯಾತರಿಗೂ ತೊಂದರೆಯಾಗಲ್ಲ. ಕೆಲವರು ವೋಟ್ ಬ್ಯಾಂಕ್ ಗಾಗಿ ಸಿಎಎ ಬಳಸಿಕೊಳ್ಳುತ್ತಿದ್ದಾರೆ. ಮುಸ್ಲೀಂರಲ್ಲಿ ಕಾಲ್ಪನಿಕ ಭಯ ಸೃಷ್ಠಿಸಲು ಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದರು.
Key words: Prime Minister-narendra Modi –loksabha-Tong- Opposition Leader –caa-ramjanmabhomi